3

ಬಿಜೆಪಿ ನಾಯಕಿ ಮಂಜುಳಾ ಕಾಪಸೆ ಮನೆ ಮುಂದೆ ವಾಮಾಚಾರ !

Published:
Updated:

ಖಾನಾಪುರ: ‘ತಮ್ಮ ರಾಜಕೀಯ ಬೆಳವಣಿಗೆಯನ್ನು ಸಹಿಸದ ಕೆಲ ಕಿಡಿಗೇಡಿಗಳು ಸೋಮವಾರ ರಾತ್ರಿ ತಮ್ಮ ಬೀಡಿ ಗ್ರಾಮದ ಮನೆಯ ಮುಂದೆ ವಾಮಾಚಾರ ಮಾಡಿಸಿದ ವಸ್ತುಗಳನ್ನು ಇಟ್ಟುಹೋಗಿದ್ದಾರೆ’ ಎಂದು ಬಿಜೆಪಿ ನಾಯಕಿ ಮಂಜುಳಾ ಕಾಪಸೆ ಆರೋಪಿಸಿದ್ದಾರೆ.

ಈ ಕುರಿತು ಬುಧವಾರ 'ಪ್ರಜಾವಾಣಿ'ಗೆ ಮಾಹಿತಿ ನೀಡಿದ ಅವರು, ‘ಸೋಮವಾರ ಸಂಜೆ ವಿವಿಧೆಡೆ ಕ್ರಿಸ್‌ಮಸ್‌ ಮತ್ತು ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ರಾತ್ರಿ 10 ಗಂಟೆಗೆ ಮನೆಗೆ ಬಂದು ಮಲಗಿದ್ದೆ. ಮರುದಿನ ಮಂಗಳವಾರ ಮುಂಜಾನೆ ಎದ್ದು ಬಾಗಿಲು ತೆರೆದಾಗ ಮನೆಯ ಮುಂಭಾಗದಲ್ಲಿ ವಾಮಾಚಾರದ ವಸ್ತುಗಳು ಕಾಣಿಸಿದವು. ಕೆಲ ದಿನಗಳ ಹಿಂದೆ ನಾನು ಹೊಸ ಕಾರು ಖರೀದಿಸಿದಾಗಲೂ ಇಂತಹ ವಸ್ತುಗಳು ಗೋಚರಿಸಿದ್ದವು’ ಎಂದು ಹೇಳಿದರು.

‘ನಾನು ಇಂತಹ ಮೂಢ ನಂಬಿಕೆ, ಗೊಡ್ಡು ಆಚರಣೆ ಮತ್ತು ಭಯ ಮೂಡಿಸುವ ಬೆದರಿಕೆಗಳಿಗೆ ಹೆದರುವುದಿಲ್ಲ. ಸಮಾಜದಲ್ಲಿ ಭಯ ಹುಟ್ಟಿಸುವ ಇಂತಹ ಕಿಡಿಗೇಡಿಗಳಿಂದ ಉಳಿದವರು ಎಚ್ಚರದಿಂದ ಇರಬೇಕು’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry