5
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in

‘ಟೈಗರ್ ಜಿಂದಾಹೈ’ ಚಿತ್ರದ ಮೊದಲ ವಾರದ ಗಳಿಕೆ ₹ 200 ಕೋಟಿ

Published:
Updated:
‘ಟೈಗರ್ ಜಿಂದಾಹೈ’ ಚಿತ್ರದ ಮೊದಲ ವಾರದ ಗಳಿಕೆ ₹ 200 ಕೋಟಿ

ಮುಂಬೈ: ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಹಾಗೂ ಕತ್ರೀನಾ ಕೈಫ್ ಅಭಿನಯದ ‘ಟೈಗರ್ ಜಿಂದಾಹೈ’ ಚಿತ್ರ ಡಿ.22ರಂದು ಬಿಡುಗಡೆಯಾಗಿದ್ದು, ಮೊದಲ ವಾರ ₹ 200 ಕೋಟಿ ಗಳಿಸಿದೆ.

ವಿಶ್ವದಾದ್ಯಂತ 5700 ಚಿತ್ರಮಂದಿರಗಳಲ್ಲಿ ತೆರೆ ಕಂಡಿರುವ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 

‘ಏಕ್ ಥಾ ಟೈಗರ್’ ಹಿಂದಿ ಚಿತ್ರ ತೆರೆಕಂಡು ಐದು ವರ್ಷಗಳಾಗಿವೆ. ಕಬೀರ್ ಖಾನ್ ನಿರ್ದೇಶನದ ಆ ಚಿತ್ರ ಅಷ್ಟೇನೂ ಬಿಗುವಾಗಿ ಇಲ್ಲದಿದ್ದರೂ ಕೆಲವು ರೋಮಾಂಚಕ ಸಾಹಸ ಸನ್ನಿವೇಶಗಳಿಂದಲೇ ಜನಮನ ಗೆದ್ದಿತ್ತು.

‘ಏಕ್ ಥಾ ಟೈಗರ್’ನ ಮುಂದುವರಿದ ಭಾಗವಾದ ‘ಟೈಗರ್ ಜಿಂದಾಹೈ’ ಹಾಲಿವುಡ್ ಶೈಲಿಯ ತಾಂತ್ರಿಕ ಕಸುಬುದಾರಿಕೆ ಚಿತ್ರದ ಸಕಾರಾತ್ಮಕ ಅಂಶವಾಗಿದೆ.

ಪ್ರಸಕ್ತ ವರ್ಷ ಸಲ್ಮಾನ್‌ ಖಾನ್‌ ಅಭಿನಯದ ಈ ಚಿತ್ರ ಬಿಡುಗಡೆಯಾದ ಮೊದಲ ವಾರದಲ್ಲಿ ಹೆಚ್ಚು ಗಳಿಕೆ ಮಾಡಿದ ಎರಡನೇ ಸಿನಿಮಾ ಇದಾಗಿದೆ. ಬಾಹುಬಲಿ–2 ಮೊದಲ ಸ್ಥಾನದಲ್ಲಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry