7

‘ಬಸ್‌ ನಿಲ್ದಾಣ ಸಮೀಪ: ಇಂದಿರಾ ಕ್ಯಾಂಟೀನ್‌ ಪ್ರಾರಂಭಿಸಿ’

Published:
Updated:

ಹಿರೇಕೆರೂರ: ಇಲ್ಲಿನ ವಾಯುವ್ಯ ಸಾರಿಗೆ ಘಟಕದ ಬಸ್‌ ನಿಲ್ದಾಣದ ಸಮೀಪಲ್ಲಿ ಪ್ರಾರಂಭಿಸಲು ನಿರ್ಧರಿಸಿರುವ ಇಂದಿರಾ ಕ್ಯಾಂಟೀನ್‌ನ್ನು ಯಾವುದೇ ಕಾರಣಕ್ಕೂ ಸ್ಥಳಾಂತರಿಸಬಾರದು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಗಿರೀಶ ಬಾರ್ಕಿ ಮಾತನಾಡಿ, ‘ಇಂದಿರಾ ಕ್ಯಾಂಟೀನ್‌ ಬಸ್ ನಿಲ್ದಾಣ ಸಮೀಪದಲ್ಲಿ ಪ್ರಾರಂಭಿಸುವುದರಿಂದ ಅನೇಕರಿಗೆ ಅನುಕೂಲವಾಗುತ್ತದೆ.

ಸರ್ಕಾರಿ ಕಚೇರಿ ಮುಂದೆ ಆರಂಭಿಸಿದರೆ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜೆಗಳ ಸಮಯದಲ್ಲಿ ಕಚೇರಿಗಳಿಗೆ ಸಾರ್ವಜನಿಕರ ಸಂಪರ್ಕ ಇರುವುದಿಲ್ಲ. ಆದ್ದರಿಂದ, ಬಸ್‌ ನಿಲ್ದಾಣದ ಸಮೀಪ ದಲ್ಲಿಯೇ ಪ್ರಾರಂಭಿಸಬೇಕು’ ಎಂದು ಅವರು ಒತ್ತಾಯಿಸಿದರು. ಕರವೇ ಪದಾಧಿಕಾರಿಗಳಾದ ಬಿ. ಎಚ್. ಬಣಕಾರ, ಕನ್ನಪ್ಪ ಮಾಳಕ್ಕನವರ, ಮಾರುತಿ ಪೂಜಾರ, ಉಜನೇಶ ಚಿಂದಿ, ನಿಯಾಜ್ ಮಕಾನದಾರ್‌, ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry