7

ಗ್ರಾಮಗಳ ಮೂಲ ಸೌಲಭ್ಯಕ್ಕೆ ಮೊದಲು ಆದ್ಯತೆ: ಮಾಲೀಕಯ್ಯ

Published:
Updated:

ಅಫಜಲಪುರ: ತಾಲ್ಲೂಕಿನ ಗ್ರಾಮಗಳಲ್ಲಿ ಮೂಲಸೌಲಭ್ಯಕ್ಕೆ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಮಾಲೀಕಯ್ಯ ಗುತ್ತೇದಾರ ತಿಳಿಸಿದರು. ತಾಲ್ಲೂಕಿನ ದೇವಲಗಾಣಗಾಪುರದ ವಾರ್ಡ್‌ ನಂ. 5ರ ಲಕ್ಷ್ಮೀ ನಗರ ದಲ್ಲಿ ₹ 20 ಲಕ್ಷದ ಸಿಮೆಂಟ್‌ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಈಗಾಗಲೇ ತಾಲ್ಲೂಕಿ ನಲ್ಲಿ ಮುಖ್ಯರಸ್ತೆಗಳು ನಿರ್ಮಾಣ ಮಾಡ ಲಾಗಿದೆ. ಕೆಲವು ಕಡೆ ರಾಜ್ಯ– ರಾಷ್ಟ್ರೀಯ ಹೆದ್ದಾರಿ ನಿರ್ಮಿಸ ಲಾಗಿದೆ. ಕೆಲವು ಕಡೆ ಗ್ರಾಮಾಂತರ ದಲ್ಲಿಯೂ ಸಿಮೆಂಟ್‌ ರಸ್ತೆ ಮಾಡಲಾಗು ತ್ತಿದೆ’ ಎಂದು ತಿಳಿಸಿದರು.

ದೇವಲಗಾಣಗಾಪುರದ ದತ್ತ ದೇವಸ್ಥಾನಕ್ಕೆ ಬೇರೆ ರಾಜ್ಯಗಳಿಂದ ಯಾತ್ರಿಕರು ಬರುವುದರಿಂದ ಇಲ್ಲಿ ಹೆಚ್ಚಿನ ಸುಧಾರಣೆಗಳು ಅಗತ್ಯವಾಗಿವೆ. ಶುದ್ಧ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಮಾಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷ ಮಹೇಶ ಗುತ್ತೇದಾರ, ತಾ.ಪಂ ಸದಸ್ಯ ಭಗವಂತ ಜಕಬಾ, ಖಾದಿ ಗ್ರಾಮೋದ್ಯೋಗ ಮಂಡಳಿ ನಿರ್ದೇಶಕ ಮಲ್ಲಿನಾಥ ಪಾಟೀಲ ಹಾಗೂ ಮುಖಂಡರಾದ ದೇವೇಂದ್ರ ಜಮಾದಾರ, ಮಲ್ಲಿಕಾರ್ಜುನ ವಡಗೇರಿ, ಪಿಂಟು ಮನಿಯಾರ, ದಿಗಂಬರ ಕರಜಗಿ, ಅನ್ವರ್ ತಾಂಬೋಳಿ, ದತ್ತು ಸಿಂಧೆ, ಬಸವರಾಜ ಭಜಂತ್ರಿ, ಅರ್ಚಕರಾದ ಬಾಳುಭಟ್‌ ಪೂಜಾರಿ, ನರೇಂದ್ರ ಭಟ್‌ ಪೂಜಾರಿ, ಕರುಣಾಕರ ಭಟ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry