7

10 ತಾಲಿಬಾನ್ ಉಗ್ರರನ್ನು ಹೊಡೆದುರುಳಿಸಿದ ಅಫ್ಘಾನ್ ಭದ್ರತಾ ಪಡೆ

Published:
Updated:
10 ತಾಲಿಬಾನ್ ಉಗ್ರರನ್ನು ಹೊಡೆದುರುಳಿಸಿದ ಅಫ್ಘಾನ್ ಭದ್ರತಾ ಪಡೆ

ಕಾಬೂಲ್: ಅಫ್ಘಾನಿಸ್ತಾನದ ಉರುಜಾನ್ ವಲಯದಲ್ಲಿ ಶನಿವಾರ ಅಫ್ಘಾನ್ ಭದ್ರತಾ ಪಡೆ ಹಾಗೂ ತಾಲಿಬಾನ್ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ 10 ತಾಲಿಬಾನ್ ಉಗ್ರರ ಹತ್ಯೆಯಾಗಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ.

ಘಟನೆಯಲ್ಲಿ ಒಬ್ಬ ಅಫ್ಘಾನಿಸ್ತಾನದ ಯೋಧ ಮೃತಪಟ್ಟಿದ್ದು, ಹಲವರಿಗೆ ಗಾಯಗಳಾಗಿವೆ.

ಶಿಖಾ ಎಂಬ ಪ್ರದೇಶದ ಮೇಲೆ ತಾಲಿಬಾನ್ ಉಗ್ರರು ದಾಳಿ ನಡೆಸಿದ್ದರು. ಪ್ರತಿಯಾಗಿ ಗುಂಡಿನ ದಾಳಿ ನಡೆಸಿದ ಭದ್ರತಾ ಪಡೆ ಉಗ್ರರನ್ನು ಒಳಗೆ ನುಸುಳದಂತೆ ತಡೆಯೊಡ್ಡಿತ್ತು. ಆಗ ಎರಡು ಪಡೆಗಳ ನಡುವೆ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry