7

ತೃಪ್ತ

Published:
Updated:
ತೃಪ್ತ

ಆಗಲೂ ಅರ್ಜಿ ಗುಜರಾಯಿಸಿರಲಿಲ್ಲ

ತಾನಾಗೆ ಮಂಜೂರು ದರಖಾಸ್ತು ತುಂಡು ನೆಲ

ಇರಬಹುದು ಚೂರು ಕಹಿ, ಬಾಕಿ ಬೆಲ್ಲ

ಇನ್ನು ಬೇಕೆಂದರೆ ಅದು ತೀರಾ ಸಲ್ಲಆಗ್ರಹಕು ದೈನ್ಯತೆಗು ಅರ್ಥವೇ ಇಲ್ಲ

ಕಾಣಿಸದ ಪ್ರಭುವಿಗೆ ಪುರುಸೊತ್ತೆ ಇಲ್ಲ

ಕೋಟಿ ಕಡತಗಳು ಕೊಳೆಯುತಿವೆಯಲ್ಲ

ಸುಮ್ಮನಿರು ಮಾರಾಯ ಲೋಭ ತರವಲ್ಲ

ಬೇಡಿಕೆಯ ಮಂಡನೆ ಸಾಕಪ್ಪ ಸಾಕು

ಈ ಮುಖಕೆ ಈ ಸಲಕೆ ಇನ್ನೆಷ್ಟು ಬೇಕು

ಯಾರು ಕೊಟ್ಟಿದ್ದರೋ ಗ್ಯಾರಂಟಿ ಕಾರ್ಡು

ಅಳಬೇಡ ಚಪ್ಪಲಿಗೆ ಕಾಲಿರದವನ ನೋಡುಧನ್ಯತೆಯ ಹೇಳುತ್ತ ತಲೆಬಾಗಿ ನಮಿಸುತ್ತ

ಪಡೆದುದೆಲ್ಲವ ಮರಳಿ ಕೊಡಲು ಅಣಿಯಾಗು

ನೀ ಬರುವ ಮುನ್ನವೇ ನಿನಗಾಗಿ ಕಾಯುತ್ತ

ನಿಂತ ಸಾಲುಮರಗಳಿಗೆ ನಿಜಕು ಋಣಿಯಾಗು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry