7

ಭಾನುವಾರ, 31–12–1967

Published:
Updated:

ಭಾರತಕ್ಕೆ 35 ಲಕ್ಷ ಟನ್ ಅಮೆರಿಕ ಧಾನ್ಯ: ಹೊಸ ಒಪ್ಪಂದಕ್ಕೆ ಸಹಿ

ನವದೆಹಲಿ, ಡಿ. 30– ಭಾರತವು ಅಮೆರಿಕದಿಂದ 35 ಲಕ್ಷ ಟನ್ ಆಹಾರ ಧಾನ್ಯವನ್ನು ಪಿ.ಎಲ್. 480 ಕಾರ್ಯಕ್ರಮದಂತೆ ಕೊಳ್ಳಲು ಇಂದು ಒಪ್ಪಂದವೊಂದಕ್ಕೆ ಸಹಿಬಿತ್ತು.

ಈ ಆಹಾರ ಧಾನ್ಯಕ್ಕೆ 2007 ದಶಲಕ್ಷ ಡಾಲರ್ (150.03 ಕೋಟಿ ರೂ.) ಬೆಲೆ ಕಟ್ಟಲಾಗಿದೆ.

ಇದರಲ್ಲಿ ಕೊಂಡ ಆಹಾರ ಧಾನ್ಯವನ್ನು ಜನವರಿ ತಿಂಗಳಲ್ಲಿ ಕಳುಹಿಸಲಾಗುವುದು. ಇಡೀ ಪ್ರಮಾಣವನ್ನು 1968ರ ಮಧ್ಯ ಭಾಗದ ವೇಳೆಗೆ ಅಮೆರಿಕದಿಂದ ಕಳುಹಿಸಲಾಗುವುದು.

ಉಳುವವನಿಗೆ ಭೂಮಿ: ಜನಸಂಘ ರೈತರ ಸಭೆ ಕರೆ

ಶ್ರೀನಾರಾಯಣನಗರ, ಡಿ. 30– ಉಳುವವನಿಗೆ ಭೂಮಿ, ಮಧ್ಯವರ್ತಿಗಳಿಂದ ಶೋಷಣೆ ನಿಲ್ಲಬೇಕು. ಜನಸಂಘದ ಆಶ್ರಯದಲ್ಲಿ  ನಡೆದ ಕೃಷಿಗಾರರ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯದಲ್ಲಿ ಈ ಒತ್ತಾಯಪೂರ್ವಕ ಬೇಡಿಕೆಯನ್ನು ಮಂಡಿಸಲಾಗಿದೆ.

ಅಧಿಕೃತ ಭಾಷಾ ಮಸೂದೆ ರಾಜ್ಯಾಂಗಕ್ಕೆ ವಿರುದ್ಧ ಜನಸಂಘದ ಟೀಕೆ

ಶ್ರೀನಾರಾಯಣನಗರ, ಡಿ. 30– ಇತ್ತೀಚೆಗೆ ಪಾರ್ಲಿಮೆಂಟ್ ಅಂಗೀಕರಿಸಿರುವ ಅಧಿಕೃತ ಭಾಷಾ ತಿದ್ದುಪಡಿ ಮಸೂದೆಯನ್ನು ಜನಸಂಘವು ಇಂದು ಖಂಡಿಸಿತು.

ಈ ಮಸೂದೆಯನ್ನು ‘ತಪ್ಪಾಗಿ ರೂಪಿಸಲಾಗಿದೆ. ಅಲ್ಲದೆ ರಾಜ್ಯಾಂಗಕ್ಕೆ ವಿರುದ್ಧವಾಗಿದೆ’ಯೆಂದೂ ತಿಳಿಸಿತು.

ರಾಷ್ಟ್ರಪತಿ ಎದುರು ಕಪ್ಪು ಬಾವುಟ ಪ್ರದರ್ಶನ: ‘ನಾವ್‌ ತಮಿಳರ್’ ನಿರ್ಧಾರ

ಮದರಾಸ್, ಡಿ. 30– ಎರಡನೆ ವಿಶ್ವ ತಮಿಳು ಸಮ್ಮೇಳನದಲ್ಲಿ ಭಾಗವಹಿಸಲು ಜನವರಿ 2 ರಂದು ಇಲ್ಲಿಗೆ ಆಗಮಿಸಲಿರುವ ರಾಷ್ಟ್ರಪತಿ ಡಾ. ಜಾಕೀರ್ ಹುಸೇನ್ ಅವರ ಎದುರು ಕಪ್ಪುಬಾವುಟ ಪ್ರದರ್ಶಿಸಲು ‘ನಾವ್‌ ತಮಿಳರ್‌’ ಪಕ್ಷದ ಮದರಾಸ್ ಶಾಖೆಯು ನಿರ್ಧರಿಸಿದೆ. ಡಿಸೆಂಬರ್ 25 ರಂದು ಇಲ್ಲಿ ಸಮಾವೇಶಗೊಂಡಿದ್ದ ಪಕ್ಷದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry