7
ಭಯೋತ್ಪಾದನೆ ಚಟುವಟಿಕೆ ನಿಗ್ರಹಿಸಲು ವಿಫಲ: ಅಮೆರಿಕ ಅಸಮಾಧಾನ

ಪಾಕ್‌ಗೆ ಆರ್ಥಿಕ ನೆರವು ಸ್ಥಗಿತಕ್ಕೆ ಪರಿಶೀಲನೆ

Published:
Updated:

ನ್ಯೂಯಾರ್ಕ್‌: ಪಾಕಿಸ್ತಾನಕ್ಕೆ ₹1627.93 ಕೋಟಿ ಆರ್ಥಿಕ ನೆರವು ನೀಡುವುದನ್ನು ಸ್ಥಗಿತಗೊಳಿಸಲು ಅಮೆರಿಕ ಪರಿಶೀಲನೆ ನಡೆಸುತ್ತಿದೆ.

ಭಯೋತ್ಪಾದನೆ ಚಟುವಟಿಕೆಗಳನ್ನು ನಿಗ್ರಹಿಸಲು ಪಾಕಿಸ್ತಾನ ವಿಫಲವಾಗಿರುವ ಕಾರಣ ಅಮೆರಿಕ ಈ ಕ್ರಮಕೈಗೊಳ್ಳಲು ಮುಂದಾಗಿದೆ.

2002ರಿಂದ ಪಾಕಿಸ್ತಾನಕ್ಕೆ ₹2,106 ಶತಕೋಟಿಗೂ ಹೆಚ್ಚು ನೆರವನ್ನು ಅಮೆರಿಕ ನೀಡಿದೆ. ಇದೀಗ ಭಯೋತ್ಪಾದನಾ ಗುಂಪುಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವವರೆಗೂ ಹೊಸದಾಗಿ ನೆರವು ನೀಡುವನ್ನು ಸ್ಥಗಿತಗೊಳಿಸುವ ಬಗ್ಗೆ ಡೊನಾಲ್ಡ್‌ ಟ್ರಂಪ್‌ ಆಡಳಿತ ಗಂಭೀರವಾಗಿ ಪರಿಶೀಲನೆ ನಡೆಸಿದೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry