7

ಪತ್ನಿಗೆ ಪ್ರೀತಿಯ ಶುಭಾಶಯ

Published:
Updated:
ಪತ್ನಿಗೆ ಪ್ರೀತಿಯ ಶುಭಾಶಯ

ಪತಿ ಅಕ್ಷಯ್‌ ಕುಮಾರ್ ಹಾಗೂ ಕುಟುಂಬದೊಂದಿಗೆ ದಕ್ಷಿಣ ಆಫ್ರಿಕಾದ ಪ್ರವಾಸದಲ್ಲಿರುವ ಟ್ವಿಂಕಲ್‌ ಖನ್ನಾ ಅವರಿಗೀಗ ಹುಟ್ಟುಹಬ್ಬದ ಸಂಭ್ರಮ. ಅವರ ಹುಟ್ಟುಹಬ್ಬದ ಸಂಭ್ರಮಕ್ಕೆ ಅಭಿಮಾನಿಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

ಈ ನಡುವೆ ಪತಿ ಅಕ್ಷಯ್‌ ಕುಮಾರ್ ಸಹ ರಜೆ ಸಂಭ್ರಮದ ಫೋಟೊವೊಂದನ್ನು ಶೇರ್‌ ಮಾಡಿ ವಿಭಿನ್ನವಾಗಿ ಶುಭಾಶಯ ಕೋರಿದ್ದಾರೆ. ‘ಪ್ರತಿ ಪ್ರಯಾಣವೂ ಸಾಹಸಮಯ ಮತ್ತು ಮನೋರಂಜನೆಯಿಂದ ಕೂಡಿರುತ್ತದೆ. ನನ್ನ ನೆಚ್ಚಿನ ಪ್ರಯಾಣವಿದು. ಹುಟ್ಟುಹಬ್ಬದ ಶುಭಾಶಯಗಳು ಟೀನಾ’ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಶುಭ ಹಾರೈಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry