ಪಾಕಿಸ್ತಾನದ ಜೈಲುಗಳಲ್ಲಿ 457 ಭಾರತೀಯ ಕೈದಿಗಳು ಬಂಧಿ

7

ಪಾಕಿಸ್ತಾನದ ಜೈಲುಗಳಲ್ಲಿ 457 ಭಾರತೀಯ ಕೈದಿಗಳು ಬಂಧಿ

Published:
Updated:
ಪಾಕಿಸ್ತಾನದ ಜೈಲುಗಳಲ್ಲಿ 457 ಭಾರತೀಯ ಕೈದಿಗಳು ಬಂಧಿ

ಇಸ್ಲಾಮಾಬಾದ್/ನವದೆಹಲಿ: ಪಾಕಿಸ್ತಾನದ ಜೈಲುಗಳಲ್ಲಿ ಕನಿಷ್ಠ 457 ಭಾರತೀಯ ಕೈದಿಗಳು ಬಂಧಿಯಾಗಿರುವುದಾಗಿ ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮಿಷನ್‌ ಸೋಮವಾರ ತಿಳಿಸಿದೆ. 

ಪಾಕಿಸ್ತಾನದ ಜೈಲುಗಳಲ್ಲಿ ಬಂಧಿಯಾಗಿರುವ ಒಟ್ಟು ಭಾರತೀಯ ಕೈದಿಗಳ ಪಟ್ಟಿಯನ್ನು ಪಾಕಿಸ್ತಾನ ಭಾರತದೊಂದಿಗೆ ಹಂಚಿಕೊಂಡಿದೆ.

ಎರಡು ರಾಷ್ಟ್ರಗಳ ನಡುವೆ 2008ರ ಮೇ 21ರ ರಾಜತಾಂತ್ರಿಕ ಒಪ್ಪಂದದ ಪ್ರಕಾರ ಪಾಕಿಸ್ತಾನ ಹಾಗೂ ಭಾರತ ಉಭಯ ರಾಷ್ಟ್ರಗಳಲ್ಲಿರುವ ಕೈದಿಗಳ  ಪಟ್ಟಿ ಹಂಚಿಕೊಳ್ಳುತ್ತವೆ.

ಜನವರಿ 1 ಮತ್ತು ಜುಲೈ 1ರಂದು ವರ್ಷದಲ್ಲಿ ಎರಡು ಬಾರಿ ಕೈದಿಗಳ ಪಟ್ಟಿ ವಿನಿಮಯ ಮಾಡಿಕೊಳ್ಳುತ್ತವೆ.

ವರದಿಗಳ ಪ್ರಕಾರ, ಪಾಕಿಸ್ತಾನದ ಜೈಲುಗಳಲ್ಲಿ ಬಂಧಿಯಾಗಿರುವ ಭಾರತದ ಬಹುತೇಕ ಕೈದಿಗಳು ಮೀನುಗಾರರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry