ಬುಧವಾರ, ಆಗಸ್ಟ್ 5, 2020
23 °C

ಹೊಸ ವರ್ಷದಲ್ಲಿ ವಾಟ್ಸ್‌ಆ್ಯಪ್‌ ಅಡಚಣೆ: ಟ್ವಿಟರ್‌ನಲ್ಲಿ ಚಡಪಡಿಸಿದ ಬಳಕೆದಾರರು

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಹೊಸ ವರ್ಷದಲ್ಲಿ ವಾಟ್ಸ್‌ಆ್ಯಪ್‌ ಅಡಚಣೆ: ಟ್ವಿಟರ್‌ನಲ್ಲಿ ಚಡಪಡಿಸಿದ ಬಳಕೆದಾರರು

ಬೆಂಗಳೂರು: ಹೊಸ ವರ್ಷದಂದು ಭಾರತ ಸೇರಿ ಜಗತ್ತಿನ ಹಲವು ಭಾಗಗಳಲ್ಲಿ ವಾಟ್ಸ್‌ಆ್ಯಪ್‌ ಕಾರ್ಯಾಚರಣೆ ವ್ಯತ್ಯಯವಾಗಿದ್ದು, ವಾಟ್ಸ್‌ಆ್ಯಪ್‌ ಬಳಕೆದಾರರು ಟ್ವಿಟರ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಅತ್ಯಂತ ಜನಪ್ರಿಯ ಮೆಸೇಜಿಂಗ್‌ ಆ್ಯಪ್‌ ಆಗಿರುವ ಫೇಸ್‌ಬುಕ್‌ ಸ್ವಾಮ್ಯದ ವಾಟ್ಸ್‌ಆ್ಯಪ್‌, ಭಾನುವಾರ ಮಧ್ಯರಾತ್ರಿ ಕೆಲ ನಿಮಿಷ ಕಾರ್ಯಾಚರಣೆ ಸ್ಥಗಿತಗೊಂಡು ಬಳಕೆದಾರರು ನೆಚ್ಚಿನವರಿಗೆ ಸಂದೇಶ ಕಳುಹಿಸಲು ಸಾಧ್ಯವಾಗದೆ ಪೇಚಾಡಿದ್ದಾರೆ.

ಮೊಬೈಲ್‌, ನೆಟ್‌ವರ್ಕ್‌ ಅಥವಾ ಆ್ಯಪ್‌ ಸಮಸ್ಯೆಯೋ ಎಂಬುದನ್ನು ತಿಳಿಯದೆ ಟ್ವೀಟ್‌ನಲ್ಲಿ  #WhatsAppDown ಹ್ಯಾಷ್‌ಟ್ಯಾಗ್‌ ಬಳಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಮತ್ತೆ ನಿಮ್ಮ ವಾಟ್ಸ್‌ಆ್ಯಪ್‌ ಕಾರ್ಯನಿರ್ವಹಿಸಬೇಕಾದರೆ ಆಧಾರ್‌ ಸಂಪರ್ಕಿಸಿ ಎಂಬ ಟ್ವೀಟ್‌ಗಳೂ ಹರಿದಾಡಿವೆ.

ಶೇ 54 ವಾಟ್ಸ್ಆ್ಯಪ್‌ ಬಳಕೆದಾರರು ಸಂಪರ್ಕ ಸಮಸ್ಯೆ ಎದುರಿಸಿದ್ದಾರೆ. ಪ್ರಸ್ತುತ ಎಲ್ಲ ತಾಂತ್ರಿಕ ಸಮಸ್ಯೆ ಬಗೆಹರಿದಿರುವುದಾಗಿ ಸಂಸ್ಥೆಯ ವಕ್ತಾರ ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.