ಶನಿವಾರ, ಜೂಲೈ 4, 2020
21 °C

ಜಯಲಲಿತಾ ಸಿನಿಮಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಯಲಲಿತಾ ಸಿನಿಮಾ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಜೀವನ ಆಧರಿಸಿದ ಚಿತ್ರ ಸದ್ಯದಲ್ಲೇ ಸೆಟ್ಟೇರಲಿದೆ. ಜನವರಿಯಲ್ಲಿ ಸಿನಿಮಾದ ಪ್ರಿ ಪ್ರೊಡಕ್ಷನ್‌ ಕೆಲಸಗಳು ಆರಂಭವಾಗಲಿವೆ. ಜಯಲಲಿತಾ ಅವರ ಜೀವನದ ಬಗ್ಗೆ ಅನೇಕ ಗಾಳಿಸುದ್ದಿಗಳೂ ಸಾಕಷ್ಟಿವೆ. ಸಿನಿಮಾ ಯಾವೆಲ್ಲಾ ವಿಚಾರಗಳನ್ನು ಒಳಗೊಂಡಿರಬಹುದು ಎಂಬ ಸಂಗತಿ ಕುತೂಹಲ ಮೂಡಿಸಿದೆ.

ಕಳೆದ ವರ್ಷ ಜಯಲಲಿತಾ ನಿಧನರಾದ ನಂತರ ಅವರ ಬದುಕು ಆಧರಿಸಿದ ಚಿತ್ರ ನಿರ್ಮಾಣಗೊಳ್ಳಲಿದೆ ಎಂಬ ಸುದ್ದಿ ಕೇಳಿಬರುತ್ತಿತ್ತು. ಈಗ ಈ ಸುದ್ದಿ ನಿಜವಾದಂತೆ ಆಗಿದೆ. ಆದಿತ್ಯ ಭಾರದ್ವಾಜ್‌ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಚಿತ್ರಕ್ಕೆ ’ತಾಯಿ ಪುರುಚ್ಚಿ ತಲೈವಿ’ ಎಂಬ ಹೆಸರು ಅಂತಿಮಗೊಂಡಿದೆ. ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಲಿದೆ.

ಈ ಚಿತ್ರದ ಬಹುಭಾಗ ಮುಂಬೈನಲ್ಲಿ ಚಿತ್ರೀಕರಣಗೊಳ್ಳಲಿದ್ದು, ಅಗತ್ಯಬಿದ್ದರೆ ತಮಿಳುನಾಡಿನಲ್ಲೂ ಚಿತ್ರೀಕರಣ ಮಾಡಲಾಗುವುದು. ಚಿತ್ರದಲ್ಲಿ ಜಯಲಲಿತಾ ಅವರು ನಟಿಯಾಗಿದ್ದವರು ರಾಜಕಾರಣಿಯಾಗಿ, ತಮಿಳುನಾಡಿನ ಮುಖ್ಯಮಂತ್ರಿ ಪಟ್ಟಕ್ಕೆ ಏರಿದ ಬಗ್ಗೆ ತೋರಿಸಲಾಗುತ್ತದೆ ಎಂದು ಚಿತ್ರತಂಡ ಹೇಳಿದೆ.

‘ಚಿತ್ರದ ಕತೆ ಸಿದ್ಧವಾಗಿದೆ. ಆದರೆ ಜಯಲಲಿತಾ ಅವರ ಪಾತ್ರವನ್ನು ಯಾರು ಮಾಡಲಿದ್ದಾರೆ ಎಂಬುದನ್ನು ಶೀಘ್ರ ತಿಳಿಸುತ್ತೇವೆ’ ಎಂದು ಆದಿತ್ಯ ಹೇಳಿರುವುದು ಜಯಾ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.

ಚಿತ್ರ ಹೇಗಿರಲಿದೆ? ಜಯಾ ಕುರಿತ ಯಾವೆಲ್ಲಾ ವಿಚಾರಗಳನ್ನು ಚಿತ್ರ ಒಳಗೊಂಡಿರಲಿದೆ ಎನ್ನುವ ಬಗ್ಗೆ ಚಿತ್ರತಂಡ ಗುಟ್ಟುಕಾಪಾಡಿಕೊಂಡಿದೆ. ‘ಜಯಾ ಅವರು ಸಾರ್ವಜನಿಕ ವ್ಯಕ್ತಿಯಾಗಿದ್ದರಿಂದ ಸುಲಭವಾಗಿ ಮಾಹಿತಿ ಸಿಕ್ಕಿತು’ ಎಂಬ ಹಾರಿಕೆ ಉತ್ತರ ಕೊಟ್ಟಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.