ಪ್ಲಾಸ್ಟಿಕ್ ನಿಷೇಧಿತ ಪ್ರದೇಶ

ಮನೆಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಿ. ಬಟ್ಟೆಗಳಿಂದ ಮಾಡಿರುವ ಕೈ ಚೀಲಗಳನ್ನು ಮಾರ್ಕೆಟ್‌ಗೆ ಹೋಗುವಾಗ ಇಟ್ಟುಕೊಂಡಿರಿ. ಪ್ಲಾಸ್ಟಿಕ್ ಬಾಟಲಿಗಳ ಬದಲಾಗಿ ಗಾಜು ಅಥವಾ ತಾಮ್ರದ ಬಾಟಲಿಗಳನ್ನು ಉಪಯೋಗಿಸಿ.

ಸ್ಮಾರ್ಟ್ ಫೋನ್ ಬಗ್ಗೆ ಸ್ಮಾರ್ಟ್ ಆಗಿರಿ

ಸ್ಮಾರ್ಟ್ ಫೋನ್ ಅಥವಾ ಟ್ಯಾಬ್ಲೆಟ್ ಚಾರ್ಜ್ ಮಾಡುವಾಗ ಅವುಗಳನ್ನು ಫ್ಲೈಟ್ ಮೋಡ್‌ನಲ್ಲಿ ಇಟ್ಟುಬಿಡಿ. ಇದರಿಂದ ವಿದ್ಯುತ್ ಶಕ್ತಿ ಹಾಗೂ ಸಮಯ ಎರಡರ ಉಳಿತಾಯ ಸಾಧ್ಯ.

ಒಂದು ಗಂಟೆ ದೀಪ ಆರಿಸಿ

ಪ್ರತಿದಿನ ರಾತ್ರಿ ಒಂದು ಗಂಟೆ ವಿದ್ಯುತ್ ದೀಪಗಳನ್ನು ಆರಿಸಿ, ಕ್ಯಾಂಡಲ್ ಬೆಳಕಿನಲ್ಲಿ ಸಮಯ ಕಳೆಯುವುದನ್ನು ಮನೆ ಸದಸ್ಯರು ರೂಢಿ ಮಾಡಿಕೊಂಡರೆ ಉತ್ತಮ. ಈ ಸಮಯದಲ್ಲಿ ಮನೆ ಸದಸ್ಯರು ಒಟ್ಟಾಗಿ ಬೆಳದಿಂಗಳ ಊಟ ಮಾಡಬಹುದು. ಕುಶಲೋಪರಿ ಮಾತನಾಡುತ್ತಾ ಸಮಯ ಕಳೆಯಬಹುದು.

ವಿದ್ಯುತ್ ಚಾಲಿತ ವಸ್ತುಗಳ ಅವಲಂಬನೆ ಬೇಡ

ಕೂದಲು ತೊಳೆದ ಬಳಿಕ ಟವೆಲ್‌ನಿಂದ ಕೂದಲು ಒರೆಸಿಕೊಂಡು ಸೂರ್ಯನ ಬೆಳಕಿಗೆ ಕೂದಲು ಒಣಗಿಸಿಕೊಳ್ಳಿ. ವಾಷಿಂಗ್ ಮೆಷಿನ್, ಮೈಕ್ರೋವೇವ್, ಫ್ರಿಡ್ಜ್ ಅವಲಂಂಬನೆ ಹೆಚ್ಚು ಬೇಡ. ಇಂತಹ ಸಣ್ಣ ಬೆಳವಣಿಗೆಗಳು ನಮ್ಮನ್ನು ಅನಾರೋಗ್ಯದಿಂದಲೂ ದೂರವಿಡುತ್ತವೆ. ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತವೆ.

ಅಡುಗೆ ಮನೆ ಸ್ವಚ್ಛತೆಗೆ ರಾಸಾಯನಿಕ ಬೇಡ

ವಿನೆಗರ್ ಹಾಗೂ ಅಡುಗೆ ಸೋಡಾ ಬಳಸಿ ಮನೆ ಸ್ವಚ್ಛ ಮಾಡಿಕೊಳ್ಳಬಹುದು. ಆದರೆ ಹಾಗೇ ಮಾಡುವ ಮನಸು ಇರಬೇಕಷ್ಟೇ. ಕಿತ್ತಳೆ ರಸ ಹಾಗೂ ವಿನೆಗರ್ ಮಿಶ್ರ ಮಾಡಿಕೊಂಡು ಅಡುಗೆ ಮನೆ ಸ್ವಚ್ಛ ಮಾಡಿದರೆ ಮನೆ ಘಮ್ಮೆನ್ನುತ್ತದೆ.

ಬಚ್ಚಲ ಸ್ವಚ್ಛತೆಗೆ ರಾಸಾಯನಿಕ ಬೇಡ: ಬಚ್ಚಲಮನೆಯ ಶವರ್, ನಲ್ಲಿ, ನೆಲದ ಸ್ವಚ್ಛತೆಗೆ ತೀಕ್ಷ್ಣ ರಾಸಾಯನಿಕಗಳನ್ನು ಬಳಸಬೇಡಿ. ನಿಂಬೆ, ವಿನೆಗರ್‌ಗಳನ್ನು ಬಳಸಿಕೊಂಡು ಮನೆಯಲ್ಲಿಯೇ ತಯಾರಿಸಬಹುದಾದ ಸ್ವಚ್ಛತಾ ದ್ರಾವಕ ಬಳಸಿ.

ಶೌಚಾಲಯ ಹಳೆಯದಾದರೆ ಬದಲಾಯಿಸಿ

ಮನೆಯಲ್ಲಿ 1990ಕ್ಕಿಂತಲೂ ಹಿಂದೆ ಕಟ್ಟಿರುವ ಶೌಚಾಲಯಗಳಿದ್ದರೆ ಅದು ಹೆಚ್ಚು ನೀರು ಬೇಡುತ್ತದೆ. ಈಗಿನ ಹೊಸ ಟಾಯ್ಲೆಟ್ ಕಮೋಡ್‌ಗಳಿಗೆ ಅವುಗಳಿಗಿಂತ ಶೇಕಡ ಶೇ.80ರಷ್ಟು ಕಡಿಮೆ ನೀರು ಬಳಸಿದರೆ ಸಾಕು. ಹೀಗಾಗಿ ಹೊಸ ಕಮೋಡ್‌ಗೆ ಬದಲಾಯಿಸಿ. ಇದರಿಂದ ನೀರು ಉಳಿತಾಯ ಸಾಧ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.