ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದರ್ಭ ಮುಡಿಗೆ ಚೊಚ್ಚಲ ರಣಜಿ ಟ್ರೋಫಿ

Last Updated 1 ಜನವರಿ 2018, 13:12 IST
ಅಕ್ಷರ ಗಾತ್ರ

ಇಂದೋರ್‌: ಇಲ್ಲಿನ ಹೋಳ್ಕರ್‌ ಕ್ರೀಡಾಂಗಣದಲ್ಲಿ ಸೋಮವಾರ ವಿದರ್ಭ ತಂಡ ರಣಜಿ ಟ್ರೋಫಿಯಲ್ಲಿ ಚೊಚ್ಚಲ ಪ್ರಶಸ್ತಿ ಗೆದ್ದ ಸಾಧನೆ ಮಾಡಿದೆ.

ದೆಹಲಿ ತಂಡವನ್ನು 9 ವಿಕೆಟ್‌ಗಳಿಂದ ಸೋಲಿಸುವ ಮೂಲಕ ವಿದರ್ಭ ತಂಡ ಚೊಚ್ಚಲ ರಣಜಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.

ನಾಯಕ ಫೈಜ್‌ ಫಜಲ್‌ ನೆತೃತ್ವದ ವಿದರ್ಭ ತಂಡ ದೆಹಲಿ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಕಾಯ್ದುಕೊಂಡಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ 29 ರನ್‌ಗಳ ಗುರಿಯನ್ನು ಬೆನ್ನತ್ತಿದ ವಿದರ್ಭ ಒಂದು ವಿಕೆಟ್‌ ಕಳೆದು ಕೊಂಡು ಗೆಲುವಿನ ನಗೆ ಬೀರಿತು. ವಿದರ್ಭ ಇದೇ ಮೊದಲ ಬಾರಿಗೆ ಫೈನಲ್‌ ಪ್ರವೇಶಿಸಿದ್ದು ವಿಶೇಷ. 2017–18ನೇ ಸಾಲಿನ ರಣಿಜ ಟ್ರೋಫಿಯನ್ನು ಗೆಲ್ಲುವ ಮೂಲಕ ವಿದರ್ಭ ತಂಡ ಭರ್ಜರಿಯಾಗಿ ಹೊಸ ವರ್ಷವನ್ನು ಆಚರಿಸಿಕೊಂಡಿತು.

ಸೈಮಿಫೈನಲ್‌ ಪಂದ್ಯದಲ್ಲಿ ಬಲಿಷ್ಠ ಕರ್ನಾಟಕ ತಂಡವನ್ನು ಮಣಿಸಿತ್ತು. ಬೌಲರ್‌ ಗುರುಬಾನಿ ಪ್ರಸಕ್ತ ರಣಜಿ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡಿದರು.

ಸಂಕ್ಷಿಪ್ತ ಸ್ಕೋರ್‌

ದೆಹಲಿ : ಪ್ರಥಮ ಇನಿಂಗ್ಸ್‌  295-10 (102.5  ಓವರ್‌ಗಳಲ್ಲಿ )

ವಿದರ್ಭ: ಪ್ರಥಮ ಇನಿಂಗ್ಸ್‌  547-10 (163.4 ಓವರ್‌ಗಳಲ್ಲಿ)

ದೆಹಲಿ : ಎರಡನೇ ಇನಿಂಗ್ಸ್‌  280-10 (76 ಓವರ್‌ಗಳಲ್ಲಿ)

ವಿದರ್ಭ: ಎರಡನೇ ಇನಿಂಗ್ಸ್‌  32-1 (5 ಓವರ್‌ಗಳಲ್ಲಿ)

ಫಲಿತಾಂಶ: ವಿದರ್ಭಗೆ 9 ವಿಕೆಟ್‌ಗಳ ಭರ್ಜರಿ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT