ಬುಧವಾರ, ಆಗಸ್ಟ್ 5, 2020
23 °C

ಬಾಣಸಿಗರ ಪ್ರವೃತ್ತಿ ಬಿಂಬಿಸುವ ಕ್ಯಾಲೆಂಡರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಣಸಿಗರ ಪ್ರವೃತ್ತಿ ಬಿಂಬಿಸುವ ಕ್ಯಾಲೆಂಡರ್‌

ಸದಾ ಅಡುಗೆಯಲ್ಲಿ ನೂತನ ಪ್ರಯೋಗಗಳನ್ನು ಪ್ರಯೋಗಿಸುತ್ತಾ. ಆಹಾರ ಪ್ರಿಯರ ರುಚಿಮೊಗ್ಗುಗಳನ್ನು ಅರಳಿಸುವ ನಗರದ ತಾರಾ ಹೋಟೆಲ್‌ಗಳ ಬಾಣಸಿಗರು ರ‍್ಯಾಂಪ್‌ಮೇಲೆ ಹೆಜ್ಜೆಹಾಕಿದರೆ ಹೇಗಿರುತ್ತದೆ. ಅದರಲ್ಲೂ ತಮ್ಮದೇ ಚಿತ್ರವಿರುವ ಕ್ಯಾಲೆಂಡರ್‌ ಪಟವನ್ನು ಹಿಡಿದು ನಡೆದರೆ? ಇಂತಹ ಪ್ರಶ್ನೆಯೊಂದಕ್ಕೆ ಉತ್ತರವೆಂಬಂತಿತ್ತು ದಿ ಶೆಫ್ ಪೋಸ್ಟ್‌ ಸಂಸ್ಥೆ ನಗರದಲ್ಲಿ ಇತ್ತೀಚೆಗೆ ಹಿಲ್ಟನ್‌ ಬೆಂಗಳೂರಿನಲ್ಲಿ ಆಯೋಜಿಸಿದ್ದ ‘ದಿ ಶೆಫ್‌ ಪೋಸ್ಟ್‌’ ಕ್ಯಾಲೆಂಡರ್‌ ಬಿಡುಗಡೆ ಸಮಾರಂಭ.

ಈ ಕ್ಯಾಲೆಂಡರ್‌ನಲ್ಲಿ ಬಾಣಸಿಗರ ವಿಭಿನ್ನ ಹವ್ಯಾಸಗಳು ಹಾಗೂ ಅವರ ಆಸಕ್ತಿಯ ಕ್ಷೇತ್ರಗಳನ್ನು ಛಾಯಾಗ್ರಾಹಕ ಲಕ್ಕಿ ಮಲ್ಹೋತ್ರ ಬಿಂಬಿಸಿದ್ದಾರೆ. ಜೆ ಡಬ್ಲ್ಯೂ ಮ್ಯಾರಿಯೇಟ್‌, ವಿವಂತಾ ಬೈ ತಾಜ್, ಶಾಂಗ್ರಿಲಾ, ಶೆರಟಾನ್ ಗ್ರ್ಯಾಂಡ್‌, ದಿ ಲೀಲಾ, ಹಿಲ್ಟನ್, ಲಲಿತ್ ಅಶೋಕ್, ರಿನೈಸ್ಸಾನ್ಸ್ , ಬೆಂಗಳೂರು ಮ್ಯಾರಿಯೇಟ್‌, ಐಟಿಸಿ ಗಾರ್ಡೇನಿಯಾ, ತಾಜ್ ವೆಸ್ಟ್‌ ಎಂಡ್‌, ರಿಟ್ಜ್‌ ಕಾರ್ಲ್‌ಟನ್‌ ಹೋಟೆಲುಗಳ 12 ಮಂದಿ ಬಾಣಸಿಗರು ಪಾಶ್ಚಾತ್ಯ ಸಂಗೀತದ ಲಯಕ್ಕೆ ತಕ್ಕಂತೆ ತಮ್ಮದೇ ಚಿತ್ರಗಳಿರುವ ಕ್ಯಾಲೆಂಡರ್‌ಗಳನ್ನು ಹಿಡಿದು ರ‍್ಯಾಂಪ್‌ಮೇಲೆ ಹೆಜ್ಜೆಹಾಕಿದರು.

ತಿಳಿ ಗುಲಾಬಿ ಬಣ್ಣದ ಉದ್ದನೆಯ ಗೌನ್‌ ಧರಿಸಿದ್ದ ‘ರಂಗಿತರಂಗ’ದ ನಟಿ ರಾಧಿಕಾ ಚೇತನ್‌ ಶೆಫ್‌ಗಳೊಂದಿಗೆ ಹೆಜ್ಜೆ ಹಾಕಿ ಕಾರ್ಯಕ್ರಮದ ಕಳೆ ಹೆಚ್ಚಿಸಿದರು. ನಿರೂಪಕ ವಿನಯ್ ಭಾರದ್ವಾಜ್‌ ನಡೆಸಿಕೊಟ್ಟ ಟಾಕ್‌ ಷೋ ಬಾಣಸಿಗರು ಕೇವಲ ರುಚಿಕರ ಅಡುಗೆಗೆ ಸೀಮಿತವಲ್ಲ ಉತ್ತಮ ಮಾತಿನ ಮಲ್ಲರು ಹೌದು ಎಂಬುದನ್ನು ಸಾಬೀತು ಪಡಿಸಿತು.

ಶೆಫ್‌ ಪೋಸ್ಟ್ ವೆಬ್‌ಸೈಟ್‌ನ ಮುಖ್ಯಸ್ಥೆ ಸ್ನೇಹಾ ಚಂದ್ರಶೇಖರ್‌ ಮಾತನಾಡಿ, ’ಬಾಣಸಿಗರ ಜೀವನದ ಇನ್ನೊಂದು ಮುಖವನ್ನು ಪರಿಚಯಿಸುವ ಪ್ರಯತ್ನ ಇದಾಗಿದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.