‘ತ್ರಿವಳಿ ತಲಾಖ್: ಸಿದ್ದರಾಮಯ್ಯ ನಿಲುವು ಸ್ಪಷ್ಟಪಡಿಸಲಿ’

7

‘ತ್ರಿವಳಿ ತಲಾಖ್: ಸಿದ್ದರಾಮಯ್ಯ ನಿಲುವು ಸ್ಪಷ್ಟಪಡಿಸಲಿ’

Published:
Updated:

ಬೆಂಗಳೂರು: ತ್ರಿವಳಿ ತಲಾಖ್ ನಿಷೇಧಿಸುವ ಮಸೂದೆ ಬಗ್ಗೆ ರಾಜ್ಯ ಸರ್ಕಾರದ ನಿಲುವು ಏನು ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಅಬ್ದುಲ್ ಅಜೀಂ, ಪಕ್ಷದ ವಕ್ತಾರ ಸುರೇಶಕುಮಾರ್, ಸಹ ವಕ್ತಾರ ಅನ್ವರ್ ಮಾಣಿಪ್ಪಾಡಿ ಅವರು, ಮಸೂದೆ ವಿರೋಧಿಸುವುದಾಗಿ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ. ಅದು ರಾಜ್ಯ ಸರ್ಕಾರದ ನಿಲುವೇ ಎಂದು ಪ್ರಶ್ನಿಸಿದರು.

ಮಸೂದೆಯನ್ನು ಮುಸ್ಲಿಂ ಮಹಿಳೆಯರು ಸ್ವಾಗತಿಸಿದ್ದಾರೆ. ಮಸೂದೆ ಬಗ್ಗೆ ತಕರಾರು ತೆಗೆಯುವ ಮೂಲಕ ಮಹಿಳಾ ಸಶಕ್ತೀಕರಣಕ್ಕೆ ವಿರುದ್ಧವಾದ ನಿಲುವನ್ನು ಕಾಂಗ್ರೆಸ್ ಪ್ರದರ್ಶಿಸಿದೆ ಎಂದೂ ಅವರು ಟೀಕಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry