ಅಂಧರ ವಿಶ್ವಕಪ್‌: ರಾಷ್ಟ್ರೀಯ ತಂಡಕ್ಕೆ ಬಸಪ್ಪ ಆಯ್ಕೆ

7

ಅಂಧರ ವಿಶ್ವಕಪ್‌: ರಾಷ್ಟ್ರೀಯ ತಂಡಕ್ಕೆ ಬಸಪ್ಪ ಆಯ್ಕೆ

Published:
Updated:
ಅಂಧರ ವಿಶ್ವಕಪ್‌: ರಾಷ್ಟ್ರೀಯ ತಂಡಕ್ಕೆ ಬಸಪ್ಪ ಆಯ್ಕೆ

ಬೆಳಗಾವಿ: ತಾಲ್ಲೂಕಿನ ಮಾರ್ಕಂಡೇಯ ಗ್ರಾಮದ ಬಸಪ್ಪ ಲಕ್ಷ್ಮಣ ವಡ್ಡಗೋಳ ಅವರು ಇದೇ 7ರಿಂದ 21ರವರೆಗೆ ಪಾಕಿಸ್ತಾನ ಮತ್ತು ದುಬೈನಲ್ಲಿ ಆಯೋಜನೆಯಾಗಿರುವ ಅಂಧರ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.

‘ದೇಶ ಪ್ರತಿನಿಧಿಸುತ್ತಿರುವ ರಾಜ್ಯದ ಮೂವರು ಆಟಗಾರರ ಪೈಕಿ 23 ವರ್ಷದ ಬಸಪ್ಪ ಒಬ್ಬರು. ಟೂರ್ನಿಯಲ್ಲಿ 9 ದೇಶಗಳ ತಂಡಗಳು ಭಾಗವಹಿಸಲಿವೆ. ಲೀಗ್‌ ಸೇರಿ ಒಟ್ಟು 51 ಪಂದ್ಯಗಳು ನಡೆಯಲಿವೆ. ಪ್ರತಿ ಪಂದ್ಯ 40 ಓವರ್‌ಗಳದ್ದಾಗಿರುತ್ತದೆ. ಅಂತಿಮ ಹನ್ನೊಂದರ ತಂಡದಲ್ಲಿ ನಾಲ್ವರು ಬಿ–1 (ಸಂಪೂರ್ಣ ಅಂಧರು) ಇರುತ್ತಾರೆ’ ’ ಎಂದು ಸಮರ್ಥನಂ ಸಂಸ್ಥೆಯ ಬೆಳಗಾವಿ ವಿಭಾಗದ ಮುಖ್ಯಸ್ಥ ಅರುಣಕುಮಾರ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿರುವುದು ಖುಷಿ ತಂದಿದೆ. 2009ರಿಂದ ರಾಜ್ಯ ಹಾಗೂ 2014ರಿಂದ ರಾಷ್ಟ್ರಮಟ್ಟದ ಹಲವು ಟೂರ್ನಿಗಳಲ್ಲಿ ಆಡಿದ್ದೇನೆ. ಆಲ್‌ರೌಂಡ್‌ ಆಟವಾಡಿದ್ದರಿಂದ ವಿಶ್ವಕಪ್‌ನಲ್ಲಿ ಆಡುವ ಅವಕಾಶ ಲಭಿಸಿದೆ’ ಎಂದು ಬಸಪ್ಪ ಪ್ರತಿಕ್ರಿಯಿಸಿದರು.

ಈಗ ಮಾರ್ಕಂಡೇಯ ಗ್ರಾಮ ಪಂಚಾಯ್ತಿಯಲ್ಲಿ ಎಸ್‌ಡಿಎ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಚಿಕ್ಕಮಗಳೂರಿನ ಆರ್‌. ಸುನೀಲ್‌ ಮತ್ತು ಚನ್ನಪಟ್ಟಣದ ಪ್ರಕಾಶ ಜಯರಾಮಯ್ಯ ತಂಡದಲ್ಲಿರುವ ರಾಜ್ಯದ ಇತರ ಆಟಗಾರರು. ಆಂಧ್ರದ ಅಜಯ ರೆಡ್ಡಿ ತಂಡವನ್ನು ಮುನ್ನೆಡಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry