ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ–ಕಾಮರ್ಸ್: ‘ಎಂಆರ್‌ಪಿ’ ಕಡ್ಡಾಯ

Last Updated 1 ಜನವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಅಂತರ್ಜಾಲ ತಾಣಗಳಲ್ಲಿ ಸರಕು ಖರೀದಿಸುವ ಗ್ರಾಹಕರ ಹಿತ ರಕ್ಷಿಸಲು, ಇ–ಕಾಮರ್ಸ್‌ ತಾಣಗಳು ತಮ್ಮ ಉತ್ಪನ್ನಗಳ ಮೇಲೆ ಗರಿಷ್ಠ ಮಾರಾಟ ಬೆಲೆ (ಎಂಆರ್‌ಪಿ) ಮುದ್ರಿಸುವುದನ್ನು ಕೇಂದ್ರ ಸರ್ಕಾರವು ಸೋಮವಾರದಿಂದ ಕಡ್ಡಾಯ ಮಾಡಿದೆ.

ಇದರ ಜತೆಗೆ, ಉತ್ಪನ್ನಗಳ ಮೇಲೆ ಬಳಕೆಯ ಅವಧಿ ಕೊನೆಗೊಳ್ಳುವ ಮತ್ತು ಗ್ರಾಹಕರ ಹಿತರಕ್ಷಣೆಯ ವಿವರಗಳೂ ಇರಬೇಕು ಎಂದು ತಾಕೀತು ಮಾಡಿದೆ.

ಗ್ರಾಹಕರ ವ್ಯವಹಾರಗಳ ಸಚಿವಾಲಯವು 2017ರ ಜೂನ್‌ನಲ್ಲಿ ರೂಪಿಸಿದ್ದ ನಿಯಮಗಳನ್ನು ಪಾಲಿಸಲು ಕಂಪೆನಿಗಳಿಗೆ ಆರು ತಿಂಗಳ ಅವಕಾಶ ನೀಡಲಾಗಿತ್ತು. ಗ್ರಾಹಕರ ಹಿತಾಸಕ್ತಿ ರಕ್ಷಣೆ ಮತ್ತು ಸುಲಲಿತ ವ್ಯಾಪಾರ ಉದ್ದೇಶದ ‘ತೂಕ ಮತ್ತು ಅಳತೆ (ಪ್ಯಾಕೇಜ್ಡ್‌ ಸರಕು) 2011 ನಿಯಮಗಳು’ ಜ. 1ರಿಂದ ಜಾರಿಗೆ ಬಂದಿವೆ ಎಂದು ಸಚಿವಾಲಯ ತಿಳಿಸಿದೆ.

ಎಂಆರ್‌ಪಿ ಜತೆಗೆ ತಯಾರಿಕೆ ದಿನಾಂಕ, ಬಳಕೆಯ ಮುಕ್ತಾಯ ದಿನ, ಸರಕಿನ ನಿವ್ವಳ ಪ್ರಮಾಣ, ಸರಕಿನ ಮೂಲ ದೇಶ ಮತ್ತು ಗ್ರಾಹಕರ ಹಿತರಕ್ಷಣೆಯ ವಿವರಗಳು ಲೇಬಲ್‌ ಮೇಲೆ ಇರುವುದನ್ನು ಕಡ್ಡಾಯ ಮಾಡಲಾಗಿದೆ. ಈ ಎಲ್ಲ ವಿವರಗಳನ್ನು ಒಳಗೊಂಡಿರುವ ಮಾಹಿತಿಯ ಅಕ್ಷರಗಳ ಗಾತ್ರ ಹೆಚ್ಚಿಸಲೂ ಸೂಚಿಸಲಾಗಿದೆ. ಇದರಿಂದ ಗ್ರಾಹಕರು ಉತ್ಪನ್ನದ ವಿವರಗಳನ್ನು ಸುಲಭವಾಗಿ ಓದಲು ಸಾಧ್ಯವಾಗಲಿದೆ.

ಒಂದೇ ಬಗೆಯ ಮತ್ತು ಮೊದಲೇ ಪ್ಯಾಕ್ ಆದ ಸರಕಿನ ಮೇಲೆ ಬೇರೆ, ಬೇರೆ ‘ಎಂಆರ್‌ಪಿ’ ಪ್ರಕಟಿಸುವುದನ್ನು ನಿರ್ಬಂಧಿಸಲಾಗಿದೆ. ಆನ್‌ಲೈನ್‌ನಲ್ಲಿ ಮಾರಾಟವಾಗುವ ಉತ್ಪನ್ನಗಳ ಬಗ್ಗೆ ವಿವರಗಳು ಇರುವುದಿಲ್ಲ ಎಂದು ಗ್ರಾಹಕರಿಂದ ವ್ಯಾಪಕ ದೂರುಗಳು ಕೇಳಿ ಬಂದಿದ್ದರಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ. ಸದ್ಯಕ್ಕೆ ದೇಶದಲ್ಲಿ ಫ್ಲಿಪ್‌ಕಾರ್ಟ್‌, ಅಮೆಜಾನ್‌ ಇಂಡಿಯಾ, ಸ್ನ್ಯಾಪ್‌ಡೀಲ್‌, ಗ್ರೋಫರ್ಸ್‌ ಮತ್ತು ಬಿಗ್‌ಬಾಸ್ಕೆಟ್‌ ಸಂಸ್ಥೆಗಳು ಆನ್‌ಲೈನ್‌ನಲ್ಲಿ ಸರಕುಗಳನ್ನು ಮಾರಾಟ ಮಾಡುವ ಪ್ರಮುಖ ಇ–ಕಾಮರ್ಸ್‌ ಸಂಸ್ಥೆಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT