ಮುಂಬೈ ಪಬ್‌ನಲ್ಲಿ ಸಾವು ಇನ್ನೂ ಇಬ್ಬರ ಬಂಧನ

7

ಮುಂಬೈ ಪಬ್‌ನಲ್ಲಿ ಸಾವು ಇನ್ನೂ ಇಬ್ಬರ ಬಂಧನ

Published:
Updated:
ಮುಂಬೈ ಪಬ್‌ನಲ್ಲಿ ಸಾವು ಇನ್ನೂ ಇಬ್ಬರ ಬಂಧನ

ಮುಂಬೈ: ಇಲ್ಲಿನ ಕಮಲಾ ಮಿಲ್‌ ಪ್ರದೇಶದಲ್ಲಿರುವ ‘1– ಅಬೌ’ ಪಬ್‌ನಲ್ಲಿ ನಡೆದ ಬೆಂಕಿ ದುರಂತಕ್ಕೆ ಸಂಬಂಧಿಸಿ ಇಬ್ಬರು ಮ್ಯಾನೇಜರ್‌

ಗಳನ್ನು ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆ. ಭಾನುವಾರ ಪಬ್‌ ಮಾಲೀಕರ ಇಬ್ಬರು ಸಂಬಂಧಿಗಳನ್ನು ಬಂಧಿಸಲಾಗಿತ್ತು. ಇದರಿಂದ ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿದೆ.

ಮ್ಯಾನೇಜರ್‌ಗಳಾದ ಗಿಬ್ಸನ್‌ ಲೊಪೆಜ್‌ ಹಾಗೂ ಕೆವಿನ್‌ ಬಾವಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಡಿಸೆಂಬರ್‌ 29ರಂದು ಬೆಂಕಿ ಹೊತ್ತಿಕೊಂಡಾಗ ಅವರು ಪಬ್‌ನಲ್ಲಿಯೇ ಇದ್ದರು. ಆದರೆ, ಅತಿಥಿಗಳ ಸಹಾಯಕ್ಕೆ ಬರಲಿಲ್ಲ ಎಂಬ ಆರೋಪ ಅವರ ಮೇಲಿದೆ. ಪಬ್‌ನಲ್ಲಿ ನಡೆದ ದುರಂತದಲ್ಲಿ 14 ಮಂದಿ ಸಾವನ್ನಪ್ಪಿದ್ದರು. 21 ಮಂದಿ ಗಾಯಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry