ಶನಿವಾರ, ಜೂಲೈ 4, 2020
21 °C

ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳಲು ವಿಫಲವಾಗುವ ಗ್ರಾಹಕರಿಂದ ಎಸ್‍ಬಿಐ ವಸೂಲಿ ಮಾಡಿದ ದಂಡ ₹1771 ಕೋಟಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳಲು ವಿಫಲವಾಗುವ ಗ್ರಾಹಕರಿಂದ ಎಸ್‍ಬಿಐ ವಸೂಲಿ ಮಾಡಿದ ದಂಡ ₹1771 ಕೋಟಿ!

ನವದೆಹಲಿ: ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳಲು ವಿಫಲವಾಗುವ ಗ್ರಾಹಕರಿಂದ 2017 ಏಪ್ರಿಲ್- ನವೆಂಬರ್ ತಿಂಗಳ ಅವಧಿಯಲ್ಲಿ ಬ್ಯಾಂಕ್ ವಿಧಿಸಿದ ದಂಡದ ಪ್ರಮಾಣ ₹2320 ಕೋಟಿ. ದೇಶದ ದೊಡ್ಡ ಬ್ಯಾಂಕ್ ಆಗಿರುವ  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉಳಿತಾಯ ಖಾತೆಗಳಲ್ಲಿ ಕನಿಷ್ಠ  ಮೊತ್ತ ಕಾಯ್ದುಕೊಳ್ಳಲು ವಿಫಲರಾದ ಖಾತೆದಾರರಿಂದ ವಸೂಲಿ ಮಾಡಿದ ದಂಡ ₹1.771 ಕೋಟಿ!

ಜುಲೈ- ಸಪ್ಟೆಂಬರ್ ತ್ರೈಮಾಸಿಕದಲ್ಲಿ ಎಸ್‍ಬಿಐಯ ಆದಾಯಕ್ಕಿಂತ ಹೆಚ್ಚಿನ ಮೊತ್ತ ದಂಡ ವಸೂಲಿಯಿಂದ ಲಭಿಸಿದೆ. ಏಪ್ರಿಲ್ - ಸಪ್ಟೆಂಬರ್ ಅವಧಿಯಲ್ಲಿ ಬ್ಯಾಂಕ್‍ನ ಲಾಭದ ಮೊತ್ತವಾದ ₹3,586 ಕೋಟಿಯ ಅರ್ಧದಷ್ಟು ಮೊತ್ತ ದಂಡ ವಸೂಲಿಯಿಂದಲೇ ಸಿಕ್ಕಿದೆ.

ಎಸ್‍ಬಿಐಯಲ್ಲಿರುವ ಖಾತೆದಾರರ ಸಂಖ್ಯೆ 42 ಕೋಟಿ. ಇದರಲ್ಲಿ 13 ಕೋಟಿ ಬೇಸಿಕ್ ಸೇವಿಂಗ್ ಬ್ಯಾಂಕ್ ಖಾತೆ ಮತ್ತು ಜನ್‍ಧನ್ ಖಾತೆ ಹೊಂದಿದವರಾಗಿದ್ದಾರೆ. ಈ ಎರಡು ಖಾತೆಗಳ ಗ್ರಾಹಕರು ಖಾತೆಯಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳಬೇಕಾಗಿಲ್ಲ.

ಕನಿಷ್ಠ  ಮೊತ್ತ ಕಾಯ್ದುಕೊಳ್ಳದ ಗ್ರಾಹಕರಿಂದ ದಂಡ ವಸೂಲಿ ಮಾಡಿದ ಬ್ಯಾಂಕ್‍ಗಳಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಎರಡನೇ ಸ್ಥಾನದಲ್ಲಿದೆ. ಏಪ್ರಿಲ್ - ನವಂಬರ್ ಅವಧಿಯಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ₹97.34 ಕೋಟಿ ವಸೂಲಿ ಮಾಡಿದೆ, ಅದೇ ವೇಳೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 68.67 ಕೋಟಿ ಮತ್ತು ಕೆನರಾ ಬ್ಯಾಂಕ್ ₹62.16 ಕೋಟಿ ವಸೂಲಿ ಮಾಡಿದೆ.

ಸಾರ್ವಜನಿಕ ವಲಯ ಬ್ಯಾಂಕ್‍ಗಳಲ್ಲಿ ಪಂಜಾಬ್ ಆ್ಯಂಡ್ ಸಿಂಧ್ ಬ್ಯಾಂಕ್ ಮಾತ್ರ ಕನಿಷ್ಠ ಮೊತ್ತ ಕಾಯ್ದುಕೊಳ್ಳದ ಗ್ರಾಹಕರಿಂದ ದಂಡ ವಸೂಲಿ ಮಾಡಲಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.