ಗುರುವಾರ , ಆಗಸ್ಟ್ 13, 2020
27 °C

ಟ್ವಿಟರ್‌: ‘ಶಿವಲಿಂಗ’ದ ಚಿತ್ರ ಹಂಚಿ ಹೊಸ ವರ್ಷ ಶುಭಕೋರಿದ ಶಮಿ ವಿರುದ್ಧ ಟೀಕೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಟ್ವಿಟರ್‌: ‘ಶಿವಲಿಂಗ’ದ ಚಿತ್ರ ಹಂಚಿ ಹೊಸ ವರ್ಷ ಶುಭಕೋರಿದ ಶಮಿ ವಿರುದ್ಧ ಟೀಕೆ

ಮುಂಬೈ: ಭಾರತ ಕ್ರಿಕೆಟ್‌ ತಂಡದ ವೇಗದ ಬೌಲರ್‌ ಮಹಮದ್‌ ಶಮಿ ತಮ್ಮ ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯ ತಿಳಿಸಲು ಹೋಗಿ ಟ್ವಿಟರ್‌ನಲ್ಲಿ ಮತ್ತೊಮ್ಮೆ ಟೀಕೆಗೆ ಗುರಿಯಾಗಿದ್ದಾರೆ.

ಹೊಸ ವರ್ಷದ ಶುಭಾಶಯವನ್ನು ಒಳಗೊಂಡ ಶಿವಲಿಂಗದ ಚಿತ್ರವೊಂದನ್ನು ಪ್ರಕಟಿಸಿ ‘ಹೊಸ ವರ್ಷವು ಸಂತಸ ಹಾಗೂ ಒಳ್ಳೆಯ ವಿಚಾರಗಳನ್ನು ತರಲಿದೆ. ಸಂತಸದ ಕ್ಷಣಗಳು ನಿಮ್ಮ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತದೆ ಎಂದು ಭಾವಿಸುತ್ತೇವೆ! ಹೊಸ ವರ್ಷದ ಶುಭಾಶಯಗಳು!’ ಎಂದು ಟ್ವೀಟ್‌ ಮಾಡಿದ್ದರು.

ಇದನ್ನು ಮುಸ್ಲಿಂ ಧರ್ಮಾನುಸಾರವಾಗಿ ‘ಒಪ್ಪಲಾಗದ ಸಂಗತಿ’ ಎಂದು ಪರಿಗಣಿಸಿರುವ ಕೆಲವು ಟ್ವೀಟಿಗರು ಶಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಮೊದಲೂ ಟ್ವೀಟಿಗರು ಶಮಿ ವಿರುದ್ಧ ಗರಂ ಆಗಿದ್ದರು. ಕೆಲದಿನಗಳ ಹಿಂದೆ ತನ್ನ ಮಗಳ ಹುಟ್ಟು ಹಬ್ಬ ಸಂದರ್ಭದ ಚಿತ್ರಗಳನ್ನು ಶಮಿ ಹಂಚಿಕೊಂಡಿದ್ದರು. ಈ ಚಿತ್ರಗಳಲ್ಲಿ ಸೆರೆಯಾಗಿದ್ದ ಅವರ ಪತ್ನಿ ಹಸನ್‌ ಜಹಾನ್‌ ಪಾಶ್ಚಾತ್ಯ ಶೈಲಿಯ ಉಡುಪು ಧರಿಸಿದ್ದರು.

ಹೀಗಾಗಿ ಇದು ಮುಸ್ಲಿಂ ಧರ್ಮ ವಿರೋಧಿ ನಡೆ ಎಂದು ಹಲವರು ಟೀಕಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.