ಸತ್ಯನ್ ಏರಿಕೆ; ಅಚಂತ ಕಮಲ್ ಕುಸಿತ

7

ಸತ್ಯನ್ ಏರಿಕೆ; ಅಚಂತ ಕಮಲ್ ಕುಸಿತ

Published:
Updated:
ಸತ್ಯನ್ ಏರಿಕೆ; ಅಚಂತ ಕಮಲ್ ಕುಸಿತ

ನವದೆಹಲಿ: ಭಾರತದ ಜಿ.ಸತ್ಯನ್ ಅಂತರರಾಷ್ಟ್ರೀಯ ಟೇಬಲ್ ಟೆನಿಸ್ ಫೆಡರೇಷನ್ (ಐ.ಟಿ.ಟಿ.ಎಫ್‌) ರ‍್ಯಾಂಕಿಂಗ್‌ನಲ್ಲಿ ಶರತ್ ಕಮಲ್‌ ಅವರನ್ನು ಹಿಂದಿಕ್ಕಿದ್ದಾರೆ.

ಈಚೆಗೆ ಬಿಡುಗಡೆಯಾದ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಭಾರತದ ಒಂಬತ್ತು ಆಟಗಾರರು ಅಗ್ರ 100ರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಅದರಲ್ಲಿ ಸತ್ಯನ್ 49ನೇ ಸ್ಥಾನ ಗಳಿಸಿದ್ದಾರೆ.

ಶರತ್ ಕಮಲ್‌ 51ನೇ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನಗಳಲ್ಲಿ ಸೌಮ್ಯಜಿತ್ ಘೋಷ್‌ (58), ಹರ್ಮೀತ್ ದೇಸಾಯಿ (60), ಸನೀಲ್ ಶೆಟ್ಟಿ (68), ಅಂಥೋಣಿ ಅಮಲರಾಜ್‌ (87) ಇದ್ದಾರೆ. ಮಹಿಳೆಯರ ವಿಭಾಗದಲ್ಲಿ ಮಣಿಕಾ ಬಾತ್ರಾ 62ನೇ ಸ್ಥಾನದಲ್ಲಿ ಇದ್ದಾರೆ. ಮೌಮಾ ದಾಸ್‌ (74), ಮಧುರಿಕಾ ಪಾಟ್ಕರ್‌ (81) ನಂತರದ ಸ್ಥಾನ ಪಡೆದುಕೊಂಡಿದ್ದಾರೆ.

18 ವರ್ಷದೊಳಗಿನವರ ಬಾಲಕರ ವಿಭಾಗದಲ್ಲಿ ಮಾನವ್ ಠಕ್ಕರ್‌ 18ನೇ ಸ್ಥಾನದಲ್ಲಿದ್ದಾರೆ. ಮಾನುಷ್‌ ಷಾ 47ನೇ ಸ್ಥಾನ ಹಾಗೂ ಸ್ನೇಹಿತ್‌ ಸುರವಜುಲಾ 64ನೇ ಸ್ಥಾನ ಗಳಿಸಿದ್ದಾರೆ.ಜೂನಿಯರ್ ಬಾಲಕರ ವಿಭಾಗದಲ್ಲಿ ಜೆಹೊ ಹಿಮ್‌ನಕುಪಿಗೆಟಾ 52ನೇ ಸ್ಥಾನದಲ್ಲಿದ್ದರೆ, ಪಾಯಸ್ ಜೈನ್‌ 74ನೇ ಸ್ಥಾನ ಗಳಿಸಿದ್ದಾರೆ. ಯಶಾಂಶ್ ಮಲ್ಲಿಕ್ 85ನೇ ಸ್ಥಾನದಲ್ಲಿದ್ದಾರೆ.

ಬಾಲಕಿಯರ ವಿಭಾಗದಲ್ಲಿ ದಿಯಾ 21ನೇ ಸ್ಥಾನದಲ್ಲಿದ್ದಾರೆ. ಅನುಷಾ ಕುಟುಂಬಲೆ ಮತ್ತು ವಂಶಿಕಾ ಭಾರ್ಗವ್‌ ಕ್ರಮವಾಗಿ 63 ಮತ್ತು 70ನೇ ಸ್ಥಾನ ಗಳಿಸಿದ್ದಾರೆ.

ಕರ್ನಾಟಕದ ಅರ್ಚನಾಗೆ 34ನೇ ಸ್ಥಾನ

ಐಟಿಟಿಎಫ್ ಪ್ರಕಟಿಸಿರುವ ಪಟ್ಟಿಯಲ್ಲಿ ಯೂತ್ ಬಾಲಕಿಯರ (18 ವರ್ಷದೊಳಗಿನವರ) ವಿಭಾಗದಲ್ಲಿ ಕರ್ನಾಟಕದ ಆರ್ಚನಾ ಕಾಮತ್ 34ನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ವಿಭಾಗದಲ್ಲಿ ಉತ್ತಮ ರ‍್ಯಾಂಕ್ ಗಳಿಸಿದ ಆಟಗಾರ್ತಿ ಅವರಾಗಿದ್ದಾರೆ.

ಇದೇ ಪಟ್ಟಿಯಲ್ಲಿ ಭಾರತದ ಸೆಲೆಂದೀಪ್ತಿ ಸೆಲ್ವಕುಮಾರ್‌ 95 ಮತ್ತು ಯಶಿನಿ ಶಿವಶಂಕರ್ 99ನೇ ಸ್ಥಾನ ಪಡೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry