ಅತ್ಯಾಚಾರ: ಪೊಲೀಸ್‌ ಠಾಣೆಯಲ್ಲೇ ಆತ್ಮಹತ್ಯೆಗೆ ಯತ್ನ

5

ಅತ್ಯಾಚಾರ: ಪೊಲೀಸ್‌ ಠಾಣೆಯಲ್ಲೇ ಆತ್ಮಹತ್ಯೆಗೆ ಯತ್ನ

Published:
Updated:
ಅತ್ಯಾಚಾರ: ಪೊಲೀಸ್‌ ಠಾಣೆಯಲ್ಲೇ ಆತ್ಮಹತ್ಯೆಗೆ ಯತ್ನ

ಮಥುರಾ: ಜಿಲ್ಲೆಯ ಕೊಸಿಕಲಾಂ ನಗರದ ಪೊಲೀಸ್‌ ಠಾಣೆಯಲ್ಲೇ ಒಬ್ಬ ಮಹಿಳೆ (35) ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ ಎಂದು ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.

ಅತ್ಯಾಚಾರ ನಡೆದ ಬಗ್ಗೆ ದೂರು ನೀಡಿದ್ದರೂ, ಆರೋಪಿಗಳನ್ನು ‌ಬಂಧಿಸುವಲ್ಲಿ ಪೊಲೀಸರು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಆತ್ಮಹತ್ಯೆ ಯತ್ನ ನಡೆದಿದೆ. 

19 ವರ್ಷದ ಯುವಕ ಸೇರಿದಂತೆ ಇಬ್ಬರ ವಿರುದ್ಧ ಕಳೆದ ತಿಂಗಳು ಅತ್ಯಾಚಾರ ನಡೆದಿದೆ ಎಂದು ಮಹಿಳೆ ದೂರು ನೀಡಿದ್ದು, ದೂರಿನ ಅನ್ವಯ ಇಬ್ಬರು ಆರೋಪಿಗಳ ಮೇಲೆ ಕೇಸನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪೊಲೀಸರು ತನಿಖೆ ನಡೆಸಲು ನಿಧಾನಗತಿ ತೋರುತ್ತಿದ್ದಾರೆ. ಜತೆಗೆ, ಒಬ್ಬ ಆರೋಪಿ ದೂರನ್ನು ಹಿಂಪಡೆಯುವಂತೆ ಒತ್ತಾಯ ಪಡಿಸುತ್ತಿದ್ದಾನೆ ಎಂದೂ ಮಹಿಳೆ ಆರೋಪಿಸಿದ್ದಾರೆ. ಮಹಿಳೆಯ ಆರೋಪದ ಕುರಿತು ಸಂದೇಹಗಳಿವೆ, ಆದರೂ, ತನಿಖೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry