ಶನಿವಾರ, ಜೂಲೈ 4, 2020
21 °C

ಬ್ರಿಸ್ಬೇನ್ ಟೆನಿಸ್‌ ಟೂರ್ನಿ: ಕ್ವಾರ್ಟರ್‌ಗೆ ಸ್ವಿಟೋಲಿನಾ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಬ್ರಿಸ್ಬೇನ್ ಟೆನಿಸ್‌ ಟೂರ್ನಿ: ಕ್ವಾರ್ಟರ್‌ಗೆ ಸ್ವಿಟೋಲಿನಾ

ಬ್ರಿಸ್ಬೇನ್‌, ಆಸ್ಟ್ರೇಲಿಯಾ: ಉಕ್ರೇನ್‌ನ ಎಲಿನಾ ಸ್ವಿಟೋಲಿನಾ, ಬ್ರಿಸ್ಬೇನ್‌ ಇಂಟರ್‌ನ್ಯಾಷನಲ್‌ ಟೆನಿಸ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ಪ್ಯಾಟ್‌ ರಾಫ್ಟರ್‌ ಅರೆನಾದಲ್ಲಿ ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಹಣಾಹಣಿಯಲ್ಲಿ ಸ್ವಿಟೋಲಿನಾ 6–3, 6–1ರಿಂದ ಕ್ರೊವೇ ಷ್ಯಾದ ಅನಾ ಕೊಂಜುಹ್‌ ವಿರುದ್ಧ ಗೆಲುವು ಸಾಧಿಸಿದರು.

ಎರಡೂ ಸೆಟ್‌ಗಳಲ್ಲೂ ಸ್ವಿಟೋಲಿನಾ ಅಮೋಘ ಆಟ ಆಡಿ ನಿರಾಯಾಸವಾಗಿ ಎದುರಾಳಿಯ ಸವಾಲನ್ನು ಮೀರಿದರು. ಕ್ವಾರ್ಟರ್‌ಗೆ ಪ್ಲಿಸ್ಕೋವಾ: ಜೆಕ್‌ ಗಣರಾಜ್ಯದ ಆಟಗಾರ್ತಿ, ಹಾಲಿ ಚಾಂಪಿ ಯನ್‌ ಕ್ಯಾರೋಲಿನಾ ಪ್ಲಿಸ್ಕೋವಾ ಕೂಡ ಟೂರ್ನಿಯಲ್ಲಿ ಎಂಟರ ಘಟ್ಟ ಪ್ರವೇಶಿಸಿದರು. ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿನಲ್ಲಿ ಎರಡನೇ ಶ್ರೇಯಾಂ ಕಿತೆ ಪ್ಲಿಸ್ಕೋವಾ 6–1, 6–1ರಲ್ಲಿ ಅಮೆರಿಕದ ಕ್ಯಾಥರಿನಾ ಬೆಲ್ಲಿಸ್‌ ವಿರುದ್ಧ ಗೆದ್ದರು.

ಎರಡನೇ ಸುತ್ತಿನ ಇತರ ಪಂದ್ಯಗಳಲ್ಲಿ ಅಲಿಯಾಕ್ಸಾಂಡ್ರ ಸಸನೊ ವಿಚ್‌ 1–6, 7–6, 6–3ರಲ್ಲಿ ಅನೆಟ್‌ ಕೊಂಟಾವೀಟ್‌ ಎದುರೂ, ಕೈಯಾ ಕನೆಪಿ 6–4, 6–3ರಲ್ಲಿ ಲೆಸಿಯಾ ಸುರೆಂಕೊ ವಿರುದ್ಧವೂ ಗೆದ್ದರು.

ಮೂರನೇ ಸುತ್ತಿಗೆ ಡೊಗೊಪೊಲೊವ್‌: ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಉಕ್ರೇನ್‌ನ ಆಟಗಾರ ಅಲೆಕ್ಸಾಂಡರ್‌ ಡೊಗೊ‍ಪೊಲೊವ್‌ ಮೂರನೇ ಸುತ್ತು ತಲುಪಿದರು. ಎರಡನೇ ಸುತ್ತಿನ ಹೋರಾಟದಲ್ಲಿ ಅಲೆಕ್ಸಾಂಡರ್‌ 6–1, 6–2ರಲ್ಲಿ ಅರ್ಜೆಂಟೀನಾದ ಹೊರಾ ಸಿಯೊ ಜೆಬಾಲ್ಲೊಸ್‌ ಅವರನ್ನು ಪರಾಭವಗೊಳಿಸಿದರು.

ಈ ವಿಭಾಗದ ಇತರ ಪಂದ್ಯಗಳಲ್ಲಿ ನಿಕ್‌ ಕಿರ್ಗಿಯೊಸ್‌ 6–7, 7–6, 6–2ರಲ್ಲಿ ಮ್ಯಾಥ್ಯೂ ಎಬ್ಡೆನ್‌ ಎದುರೂ, ಮೈಕಲ್‌ ಮಮೊಹ್‌ 6–2, 5–7, 6–4ರಲ್ಲಿ ಮಿಶಾ ಜ್ವೆರೆವ್‌ ವಿರುದ್ಧವೂ, ಅಲೆಕ್ಸ್‌ ಡಿ ಮಿನೌರ್‌ 6–4, 6–4ರಲ್ಲಿ ಮಿಲೊಸ್‌ ರಾನಿಕ್‌ ವಿರುದ್ಧವೂ ವಿಜಯಿಯಾದರು.ಅನಾ ಕೊಂಜುಹ್‌ ಬಾರಿಸಿದ ಚೆಂಡನ್ನು ಎಲಿನಾ ಸ್ವಿಟೋಲಿನಾ ಹಿಂತಿರುಗಿಸಿದರು. –ಎಎಫ್‌ಪಿ ಚಿತ್ರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.