ಶನಿವಾರ, ಜೂಲೈ 4, 2020
21 °C
ಆರಂಭಿಕ ಜೋಡಿ ಸಜ್ಜು; ಅಶ್ವಿನ್‌ ಹಾದಿ ಸುಗಮ ಸಾಧ್ಯತೆ

ಧವನ್‌ ಫಿಟ್‌; ಜಡೇಜಗೆ ಅನಾರೋಗ್ಯ

ಪಿಟಿಐ Updated:

ಅಕ್ಷರ ಗಾತ್ರ : | |

ಧವನ್‌ ಫಿಟ್‌; ಜಡೇಜಗೆ ಅನಾರೋಗ್ಯ

ಕೇಪ್‌ಟೌನ್‌, ದಕ್ಷಿಣ ಆಫ್ರಿಕಾ: ಹಿಂಗಾಲಿನ ಗಾಯಕ್ಕೆ ಒಳಗಾಗಿದ್ದ ಶಿಖರ್ ಧವನ್‌ ಗುಣಮುಖರಾಗಿದ್ದು ದಕ್ಷಿಣ ಆಫ್ರಿಕಾ ವಿರುದ್ಧ ಶುಕ್ರವಾರ ಇಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡಲು ಫಿಟ್ ಆಗಿದ್ದಾರೆ.

ಆದರೆ ರವೀಂದ್ರ ಜಡೇಜ ಅನಾರೋಗ್ಯಕ್ಕೆ ತುತ್ತಾಗಿರುವುದು ಭಾರತದ ಪಾಳಯದಲ್ಲಿ ಆತಂಕ ಮೂಡಿಸಿದೆ. ಧವನ್ ಗುಣಮುಖರಾಗಿರುವುದ ರಿಂದ ಮುರಳಿ ವಿಜಯ್ ಅವರ ಜೊತೆ ಮೊದಲ ‍ಪಂದ್ಯದಲ್ಲಿ ಕಣಕ್ಕೆ ಇಳಿಯಲಿದ್ದಾರೆ. ಈ ವಿಷಯವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬುಧವಾರ ಖಚಿತಪಡಿಸಿದೆ.

‘ಎರಡು ದಿನಗಳಿಂದ ಅನಾ ರೋಗ್ಯದಿಂದ ಬಳಲುತ್ತಿರುವ ಜಡೇಜ ಅವರಿಗೆ ಚಿಕಿತ್ಸೆ ಕೊಡಿಸಲಾಗಿದ್ದು ಸಂಪೂರ್ಣ ಗುಣಮುಖರಾದರೆ ಮಾತ್ರ ಕಣಕ್ಕೆ ಇಳಿಸಲಾಗುವುದು. ಬಿಸಿಸಿಐ ವೈದ್ಯಕೀಯ ತಂಡ ಅವರ ಆರೈಕೆ ಮಾಡುತ್ತಿದೆ. ಸ್ಥಳೀಯ ವೈದ್ಯರ ಜೊತೆಗೂ ಚಿಕಿತ್ಸೆಯ ಕುರಿತು ಚರ್ಚೆ ಮಾಡುತ್ತಿದ್ದಾರೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದರು.

ಪಂದ್ಯದಲ್ಲಿ ಮೂವರು ವೇಗಿಗಳು ಮತ್ತು ಒಬ್ಬರು ಸ್ಪಿನ್ ಬೌಲರ್‌ನನ್ನು ಆಡಿಸಲು ತಂಡ ನಿರ್ಧರಿಸಿದರೆ ಜಡೇಜ ಬದಲಿಗೆ ರವಿಚಂದ್ರನ್ ಅಶ್ವಿನ್‌ ಅವಕಾಶ ಪಡೆಯುವ ಸಾಧ್ಯತೆ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.