ಶನಿವಾರ, ಆಗಸ್ಟ್ 8, 2020
22 °C
ಕುಂದುಕೊರತೆ ಸಭೆಯಲ್ಲಿ ಜಿಲ್ಲಾಧಿಕಾರಿ ಜೆ.ಮಂಜುನಾಥ ಹೇಳಿಕೆ

ನೂತನ ತಾಲ್ಲೂಕಿಗೆ ₹5 ಕೋಟಿ ಅನುದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ‘ಪ್ರತಿ ನೂತನ ತಾಲ್ಲೂಕುಗಳ ಅಭಿವೃದ್ಧಿಗೆ ಸರ್ಕಾರ ₹5 ಕೋಟಿ ಬಿಡುಗಡೆ ಮಾಡಿದ್ದು, ಅಭಿವೃದ್ಧಿ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ ಹೇಳಿದರು.

ಜಿಲ್ಲಾಡಳಿತ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕುಂದುಕೊರತೆ ಸಭೆಯಲ್ಲಿ ಅವರು ಮಾಹಿತಿ ನೀಡಿದರು.

‘ಗುರುಮಠಕಲ್, ಹುಣಸಗಿ ಹಾಗೂ ವಡಗೇರಾ ತಾಲ್ಲೂಕುಗಳಲ್ಲಿ ವಿವಿಧ ಇಲಾಖೆ ಕಚೇರಿಗಳ ಸ್ಥಾಪಿಸಲು ಸ್ಥಳಾವಕಾಶ ಹಾಗೂ ಕಟ್ಟಡಗಳನ್ನು ಬಾಡಿಗೆ ರೂಪದಲ್ಲಿ ಪಡೆಯಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಗುರುಮಠಕಲ್ ತಾಲ್ಲೂಕಿಗೆ ಅಜಲಾಪುರ ಗ್ರಾಮ ಪಂಚಾಯಿತಿಗೆ ಸೇರಿದ ಬದ್ದೆಪ್ಪಲ್ಲಿ ಗ್ರಾಮವನ್ನು, ವಡಗೇರಾ ತಾಲ್ಲೂಕಿಗೆ ಮಾಲಹಳ್ಳಿ, ಗಡ್ಡೆಸೂಗೂರು, ತೇಗರಾಳ, ಬಬಲಾದ ಗ್ರಾಮಗಳನ್ನು ಹಾಗೂ ಗೆದ್ದಲಮರಿ, ಬೈಲಕುಂಟಿ, ಕಾಮನಟಗಿ, ಕಚಕನೂರು, ಹೆಬ್ಬಾಳ-ಬಿ. ಗ್ರಾಮಗಳನ್ನು ನೂತನ ಹುಣಸಗಿ ತಾಲ್ಲೂಕಿಗೆ ಸೇರ್ಪಡೆ ಮಾಡುವ ಬಗ್ಗೆ ಚರ್ಚಿಸಿ ನಿರ್ಣಯಿಸಲಾಯಿತು.

ಶೆಡ್ಯೂಲ್ 112ರ ಪ್ರಕಾರ ಗ್ರಾಮಗಳ ಸೇರ್ಪಡೆ ಹಾಗೂ ಬದಲಾವಣೆ ಮಾಡಲಾಗುತ್ತಿದೆ. ನೂತನ ತಾಲ್ಲೂಕುಗಳಿಗೆ ಸೇರ್ಪಡೆ ಮಾಡಿದ ಗ್ರಾಮಗಳ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಸೂಚಿಸಿದರು.

**

ನೂತನ ತಾಲ್ಲೂಕು ಕೇಂದ್ರಗಳಲ್ಲಿ ಕಟ್ಟಡಗಳ ಕೊರತೆ ಉಂಟಾದರೆ ಬಾಡಿಗೆ ಕಟ್ಟಡಗಳನ್ನು ಪಡೆದು ಕಚೇರಿಗಳನ್ನು ತತಕ್ಷಣ ಆರಂಭಿಸಬೇಕು.

-ಜೆ.ಮಂಜುನಾಥ

ಜಿಲ್ಲಾಧಿಕಾರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.