ತ್ರಿವಳಿ ತಲಾಖ್ ಮಸೂದೆಗೆ ವಿರೋಧ

7

ತ್ರಿವಳಿ ತಲಾಖ್ ಮಸೂದೆಗೆ ವಿರೋಧ

Published:
Updated:
ತ್ರಿವಳಿ ತಲಾಖ್ ಮಸೂದೆಗೆ ವಿರೋಧ

ಕಲಬುರ್ಗಿ: ‘ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ಮಸೂದೆಯನ್ನು ಕಾನೂನಾಗಿ ರೂಪಿಸಲು ಮುಂದಾಗಿರುವುದು ಸರಿ ಯಲ್ಲ’ ಎಂದು ಮರ್ಕಜಿ ಸಿರತ್ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಮಹಮ್ಮದ್ ಅಸಗರ ಚುಲಬುಲ್ ಹೇಳಿದರು.

ಮರ್ಕಜಿ ಸಿರತ್ ಸಮಿತಿಯಿಂದ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೇಂದ್ರ ಸರ್ಕಾರ ತರಾತುರಿ ಮಾಡಿ ಒಂದೇ ದಿನದಲ್ಲಿ ಈ ಮಸೂದೆ ಮಂಡಿಸಿದೆ. ಮಸೂದೆಯಲ್ಲಿ ಸಾಕಷ್ಟು ತಪ್ಪು ಅಂಶಗಳಿವೆ. ತಲಾಖ್‌ನಿಂದ ಪತಿಗೆ 3 ವರ್ಷ ಜೈಲು ಹಾಗೂ ದಂಡ ವಿಧಿಸಲಾಗಿದೆ. ಜೈಲಿನಲ್ಲಿರುವ ವ್ಯಕ್ತಿ ತಮ್ಮ ಕುಟುಂಬಕ್ಕೆ ಯಾವ ರೀತಿ ರಕ್ಷಣೆ ನೀಡಬೇಕು ಮತ್ತು ಜೈಲಿನಿಂದ ಹೊರಬಂದು ಹೇಗೆ ಜೀವನ ನಡೆಸಬೇಕು ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಿಲ್ಲ’ ಎಂದರು.

ತನ್ವೀರ್ ಅಶ್ರಫಿ, ಗೌಸುದ್ದೀನ್, ಶಫೀಕ್ ಅಹ್ಮದ್, ಅಜೀಜುಲ್ಲಾ ಸರಮಸ್ತ, ಅಬ್ದುಲ್ ಖದೀರ್, ನಜಮುಲ್ ಇಸ್ಲಾಂ ಅಹ್ಮದ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry