ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಮರು ಬ್ಯಾಂಕಿಂಗ್ ಉದ್ಯೋಗಿಗಳನ್ನು ಮದುವೆಯಾಗಬಾರದು : ದರೂಲ್ ಸಂಸ್ಥೆ ಫತ್ವಾ

ಬ್ಯಾಂಕಿಂಗ್ ಉದ್ಯೋಗಿಗಳು ಅಕ್ರಮದಿಂದ(ಹರಾಮ್–haram) ಹಣ ಸಂಪಾದಿಸುತ್ತಾರೆ
Last Updated 4 ಜನವರಿ 2018, 13:40 IST
ಅಕ್ಷರ ಗಾತ್ರ

ಲಖನೌ: ಮುಸ್ಲಿಮರು ಬ್ಯಾಂಕಿಂಗ್ ಉದ್ಯೋಗಿಗಳನ್ನು ಮದುವೆಯಾಗಬಾರದು ಎಂದು ಉತ್ತರ ಪ್ರದೇಶದ ಇಸ್ಲಾಮಿಕ್ ಧಾರ್ಮಿಕ ಸಂಸ್ಥೆ ದರೂಲ್ ಉಲೂಮ್ ಫತ್ವಾ ಹೊರಡಿಸಿದೆ.

ಬ್ಯಾಂಕಿಂಗ್ ಉದ್ಯೋಗಿಗಳು ಅಕ್ರಮದಿಂದ(ಹರಾಮ್–haram) ಹಣ ಸಂಪಾದಿಸುತ್ತಾರೆ. ಅವರ ಕುಟುಂಬದವರನ್ನು ಮದುವೆಯಾಗಬಾರದು ಎಂದು ಫತ್ವಾ ಹೊರಡಿಸಲಾಗಿದೆ.

'ಬ್ಯಾಂಕ್‌ ಉದ್ಯೋಗಿಗಳು ನಿಸ್ಸಂಶಯವಾಗಿ ಅಕ್ರಮವಾಗಿ ಹಣ ಸಂಪಾದಿಸುತ್ತಾರೆ. ಇಂತಹ ಕುಟುಂಬಗಳಿಗೆ ಪ್ರಾಮುಖ್ಯ ಕೊಡಬೇಕಾ?' ಎಂದು ಸಂಸ್ಥೆಯು ಪ್ರಶ್ನಿಸಿದೆ.

ಯಾರು ಅನ್ಯಾಯದ ಮಾರ್ಗದಲ್ಲಿ ಹಣ ಸಂಪಾದಿಸುತ್ತಾರೋ ಅವರಲ್ಲಿ ಗೌರವವಿರುವುದಿಲ್ಲ. ಹಾಗಾಗಿ ಇಂತಹ ಕುಟುಂಬಗಳನ್ನು ತಿರಸ್ಕರಿಸಿ. ಧಾರ್ಮಿಕ ಸಂಪ್ರದಾಯ ಬದ್ಧ ಕುಟುಂಬವನ್ನು ಆರಿಸಿಕೊಳ್ಳಿ’ ಎಂದು ಫತ್ವಾದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT