ಗುರುವಾರ , ಜೂಲೈ 2, 2020
23 °C

ದೀಪಕ್‌ ಹತ್ಯೆ: "ಕಿಲ್ಲರ್‌ ಕಾಂಗ್ರೆಸ್" ಎಂದು ಟ್ವೀಟ್‌ ಮಾಡಿರುವ ಸಚಿವ ಅನಂತ್‌ ಕುಮಾರ್‌ ಹೆಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೀಪಕ್‌ ಹತ್ಯೆ: "ಕಿಲ್ಲರ್‌ ಕಾಂಗ್ರೆಸ್" ಎಂದು ಟ್ವೀಟ್‌ ಮಾಡಿರುವ ಸಚಿವ ಅನಂತ್‌ ಕುಮಾರ್‌ ಹೆಗಡೆ

ಬೆಂಗಳೂರು: ಬಿಜೆಪಿ ಕಾರ್ಯಕರ್ತ ದೀಪಕ್‌ ರಾವ್‌ ಹತ್ಯೆ ಖಂಡಿಸಿ ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ ಕಾಂಗ್ರೆಸ್ ಪಕ್ಷವನ್ನು "ಕಿಲ್ಲರ್‌ ಕಾಂಗ್ರೆಸ್" ಎಂದು ಕರೆದಿದ್ದಾರೆ. 

ರಕ್ತ ಸಿಕ್ತವಾಗಿರುವ ಹಸ್ತದ ಗುರುತಿನಲ್ಲಿ 'ಕಿಲ್ಲರ್‌ ಕಾಂಗ್ರೆಸ್‌' ಎಂದು ಬರೆದಿರುವ ಚಿತ್ರವನ್ನು ಅವರು ಪೋಸ್ಟ್‌ ಮಾಡಿದ್ದಾರೆ.

'ನಾವು ಸಿದ್ದರಾಮಯ್ಯ ಆಳ್ವಿಕೆಯ ಇಸ್ಲಾಮಿಕ್‌ ಸ್ಟೇಟ್‌ ಪ್ರಾಯೋಜಕತ್ವದಲ್ಲಿ ಮೂರು ತಿಂಗಳಿಗೊಬ್ಬ ಹಿಂದೂವನ್ನು ಕಳೆದುಕೊಂಡಿದ್ದೇವೆ. ಈ ಸಂಖ್ಯೆಗಳ ಬಗ್ಗೆ ಹೆಮ್ಮೆ ಪಡುತ್ತಿರುವ ಕರ್ನಾಟಕದ ಮುಖ್ಯಮಂತ್ರಿ ಇವುಗಳನ್ನು ಜಾಹಿರಾತಿನಲ್ಲಿ ಬಳಸಿಕೊಂಡು ಅಲ್ಪಸಂಖ್ಯಾತರ ಮತಗಳನ್ನು ಸೆಳೆಯಲಿದ್ದಾರೆ' ಎಂದು ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.