ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಘಲ್ ಕಾಲದ ಆಭರಣ ಕಳವು

Last Updated 4 ಜನವರಿ 2018, 19:30 IST
ಅಕ್ಷರ ಗಾತ್ರ

ರೋಮ್: ಇಲ್ಲಿನ ವೆನಿಸ್ ಅರಮನೆಯಲ್ಲಿ ನಡೆಯುತ್ತಿದ್ದ ಆಭರಣ ಪ್ರದರ್ಶನದಲ್ಲಿ ಭಾರತದ ಪ್ರಖ್ಯಾತ ‘ಅಲ್ ಥಾನಿ’ ಚಿನ್ನಾಭರಣಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಪ್ರದರ್ಶನದ ಕೊನೆಯ ದಿನ ಕಳ್ಳತನವಾಗಿದೆ.

ಪದಕ ಕೊಂಡಿ, ಕಿವಿಯೋಲೆ ಇದರಲ್ಲಿ ಸೇರಿವೆ. ಕೆಲವು ಹರಳುಗಳು ಮೊಘಲರ ಕಾಲಕ್ಕೆ ಸೇರಿದ್ದು ಸಾಕಷ್ಟು ಮಹತ್ವ ಪಡೆದಿವೆ. ಆಭರಣಗಳು ಚಿನ್ನ, ಪ್ಲಾಟಿನಂ ಹಾಗೂ ವಜ್ರದಿಂದ ತಯಾರಾಗಿದ್ದು, ಕೋಟ್ಯಂತರ ರೂಪಾಯಿ ಬೆಲೆ ಬಾಳುತ್ತವೆ ಎಂದು ಪೊಲೀಸರು ಹೇಳಿದ್ದಾರೆ.

ಭದ್ರತಾ ಅಲಾರ್ಮ್ ಬೆಳಗ್ಗೆ 10ಕ್ಕೆ ಹೊಡೆಯಿತು. ತಕ್ಷಣ ಪೊಲೀಸರು ಇಡೀ ಪ್ರದೇಶವನ್ನು ಸುತ್ತುವರಿದರು. ಆದರೆ ಆ ವೇಳೆಗೆ ಕಳ್ಳರು ಪರಾರಿಯಾಗಿದ್ದರು. ತಾವು ಪರಾರಿಯಾಗುವವರೆಗೆ ಅಲಾರ್ಮ್ ಹೊಡೆಯದಂತೆ ಕಳ್ಳರು ಯೋಜನೆ ರೂಪಿಸಿದ್ದರು ಎಂದು ವೆನಿಸ್ ಪೊಲೀಸ್ ಮುಖ್ಯಸ್ಥ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT