ಗುರುವಾರ , ಆಗಸ್ಟ್ 13, 2020
27 °C

ಸಿಬಿಐಗೆ ಹೆಚ್ಚುವರಿ ಆರು ತಿಂಗಳು ಕಾಲಾವಕಾಶ ನೀಡಿದ ‘ಸುಪ್ರೀಂ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಬಿಐಗೆ ಹೆಚ್ಚುವರಿ ಆರು ತಿಂಗಳು ಕಾಲಾವಕಾಶ ನೀಡಿದ ‘ಸುಪ್ರೀಂ’

ಮಡಿಕೇರಿ: ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ತಂಡಕ್ಕೆ ಸುಪ್ರೀಂ ಕೋರ್ಟ್‌ ಹೆಚ್ಚುವರಿ ಆರು ತಿಂಗಳು ಕಾಲಾವಕಾಶ ನೀಡಿದೆ.

ಡಿಸೆಂಬರ್‌ ಒಳಗೆ ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ಕೋರ್ಟ್‌ ಈ ಹಿಂದೆ ಆದೇಶಿಸಿತ್ತು. ಆದರೆ, ತನಿಖಾ ತಂಡವು ಹೆಚ್ಚುವರಿ ಸಮಯ ಕೋರಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಮನವಿಯನ್ನು ಗುರುವಾರ ಪುರಸ್ಕರಿಸಿ ಈ ಆದೇಶ ನೀಡಿದೆ ಎಂದು ಮೃತ ಗಣಪತಿ ಸಹೋದರ ಎಂ.ಕೆ.ಮಾಚಯ್ಯ ತಿಳಿಸಿದ್ದಾರೆ.

ಸಿಬಿಐ ತಂಡವು ಮನವಿ ಸಲ್ಲಿಸಿದ್ದ ಕಾರಣ ಗಣಪತಿ ಕುಟುಂಬಕ್ಕೆ ನೋಟಿಸ್‌ ಜಾರಿ ಮಾಡಿ ಅಭಿಪ್ರಾಯ ಕೇಳಲಾಗಿತ್ತು. ಕುಟುಂಬದ ಪರವಾಗಿ ವಕೀಲ ಯತೀಂದ್ರ ಚೌಧರಿ ನ್ಯಾಯಾಲಯಕ್ಕೆ ಕುಟುಂಬಸ್ಥರ ಅಭಿಪ್ರಾಯ ತಿಳಿಸಿದ್ದರು. 2016ರ ಜುಲೈ 7ರಂದು ಮಡಿಕೇರಿ ವಿನಾಯಕ ವಸತಿಗೃಹದಲ್ಲಿ ಎಂ.ಕೆ.ಗಣಪತಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಸಚಿವ ಕೆ.ಜೆ.ಜಾರ್ಜ್‌ ಹಾಗೂ ಹಿರಿಯ ಪೊಲೀಸ್‌ ಅಧಿಕಾರಿಗಳಾದ ಪ್ರಣವ್‌ ಮೊಹಾಂತಿ, ಎ.ಎಂ.ಪ್ರಸಾದ್‌ ವಿರುದ್ಧ ಕಿರುಕುಳದ ಆರೋಪ ಹೊರಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.