ದೋನಿ ಒಪ್ಪಂದಕ್ಕೆ ಧಕ್ಕೆ?

7

ದೋನಿ ಒಪ್ಪಂದಕ್ಕೆ ಧಕ್ಕೆ?

Published:
Updated:
ದೋನಿ ಒಪ್ಪಂದಕ್ಕೆ ಧಕ್ಕೆ?

ಬೆಂಗಳೂರು: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಜೊತೆಗಿನ ಉನ್ನತ ದರ್ಜೆಯ ಕೇಂದ್ರೀಯ ಒಪ್ಪಂದವನ್ನು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ಮಹೇಂದ್ರ ಸಿಂಗ್ ದೋನಿ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಆಂಗ್ಲ ವೆಬ್‌ಸೈಟ್‌ಗಳು ವರದಿ ಮಾಡಿವೆ.

ಬಿಸಿಸಿಐನ ಆಡಳಿತಾಧಿಕಾರಿಗಳ ಸಮಿತಿ (ಸಿಎಒ) ಆಟಗಾರರ ಸಂಭಾವನೆ ಹೆಚ್ಚಳಕ್ಕೆ ಸಂಬಂಧಿಸಿದ ಪ್ರಸ್ತಾವಕ್ಕೆ ಕಳೆದ ನವೆಂಬರ್ 30ರಂದು ಅನುಮೋದನೆ ನೀಡಿತ್ತು.

ಗುರುವಾರ ಸಭೆ ಸೇರಿದ ಸಿಎಒ ನಾಲ್ಕು ಹಂತದ (ಎ+, ಎ, ಬಿ ಮತ್ತು ಸಿ) ಒ‍ಪ್ಪಂದದ ಮಾದರಿಯನ್ನು ಸಿದ್ಧಪಡಿಸಿದ್ದು ಇದರ ಪ್ರಕಾರ ಆಟಗಾರರ ಸಂಭಾವನೆ ಹೆಚ್ಚಲಿದೆ.

ಎಲ್ಲ ಮಾದರಿಯಲ್ಲಿ ಆಡುವವರು ಎ+ ಹಂತದಲ್ಲಿರುವರು. ದೋನಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗಿರುವುದರಿಂದ ಈ ಹಂತದ ಸಂಭಾವನೆಗೆ ಅರ್ಹರಾಗುವುದಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry