ಫುಟ್‌ಬಾಲ್ ಆಡಿದ ಶ್ರೀಜೇಶ್‌ಗೆ ‘ಪ್ರೊಬೇಷನ್‌’

7

ಫುಟ್‌ಬಾಲ್ ಆಡಿದ ಶ್ರೀಜೇಶ್‌ಗೆ ‘ಪ್ರೊಬೇಷನ್‌’

Published:
Updated:
ಫುಟ್‌ಬಾಲ್ ಆಡಿದ ಶ್ರೀಜೇಶ್‌ಗೆ ‘ಪ್ರೊಬೇಷನ್‌’

ನವದೆಹಲಿ: ಕಳೆದ ವರ್ಷ ಮುಂಬೈನಲ್ಲಿ ನಡೆದಿದ್ದ ಫುಟ್‌ಬಾಲ್ ಪ್ರದರ್ಶನ ಪಂದ್ಯದಲ್ಲಿ ಪಾಲ್ಗೊಂಡದ್ದಕ್ಕೆ ಭಾರತ ಹಾಕಿ ತಂಡದ ಗೋಲ್‌ಕೀಪರ್‌ ಪಿ.ಆರ್.ಶ್ರೀಜೇಶ್‌ಗೆ ಹಾಕಿ ಇಂಡಿಯಾ ಒಂದು ವರ್ಷದ ‘ಪ್ರೊಬೇಷನ್‌’ ಶಿಕ್ಷೆ ವಿಧಿಸಿದೆ. ಹಾಕಿ ಇಂಡಿಯಾದ ಶಿಸ್ತು ಸಮಿತಿ ಗುರುವಾರ ಈ ಶಿಕ್ಷೆಯನ್ನು ಪ್ರಕಟಿಸಿದೆ.

ಮೊಣಕಾಲಿಗೆ ಗಾಯಗೊಂಡು ಎಂಟು ತಿಂಗಳಿಂದ ಅಂಗಳದಿಂದ ದೂರ ಉಳಿದಿದ್ದ ಶ್ರೀಜೇಶ್ ಇತ್ತೀಚೆಗೆ ತಂಡಕ್ಕೆ ಮರಳಿದ್ದರು. ಶಿಸ್ತು ಸಮಿತಿ ಅವರಿಗೆ 15 ದಿನಗಳ ಅಮಾನತು ಕೂಡ ವಿಧಿಸಿದ್ದು ಅದು ಶುಕ್ರವಾರ ಕೊನೆಗೊಳ್ಳಲಿದೆ. ಶಿಕ್ಷೆ ಮುಗಿಯಲು ಒಂದು ದಿನ ಬಾಕಿ ಇರುವಾಗ ಹಾಕಿ ಇಂಡಿಯಾ ವಿಷಯವನ್ನು ಬಹಿರಂಗ ಮಾಡಿದೆ.

ಮುಂಬರುವ ಟೂರ್ನಿಗಳಿಗೆ ಸಜ್ಜಾಗಲು ಬೆಂಗಳೂರಿನಲ್ಲಿ ನಡೆಯಲಿರುವ ತರಬೇತಿ ಶಿಬಿರಕ್ಕೆ ಬುಧವಾರ 33 ಮಂದಿ ಆಟಗಾರರನ್ನು ಆಯ್ಕೆ ಮಾಡಲಾಗಿತ್ತು. ಇದರಲ್ಲೂ ಶ್ರೀಜೇಶ್‌ಗೆ ಸ್ಥಾನ ನೀಡಲಾಗಿತ್ತು.

ಮುಂಬೈನಲ್ಲಿ ನಡೆದ ‘ಸೆಲೆಬ್ರಿಟಿ ಕ್ಲಾಸಿಕೊ’ ಎಂಬ ಪಂದ್ಯದಲ್ಲಿ ಶ್ರೀಜೇಶ್ ಆಡಿದ್ದರು. ಇದಕ್ಕಾಗಿ ಅವರು ಹಾಕಿ ಇಂಡಿಯಾದ ಅನುಮತಿ ಪಡೆದಿರಲಿಲ್ಲ. ಈ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry