57 ಪಬ್‌, ರೆಸ್ಟೋರಂಟ್‌ ಬಂದ್‌ಗೆ ನೋಟಿಸ್‌

7

57 ಪಬ್‌, ರೆಸ್ಟೋರಂಟ್‌ ಬಂದ್‌ಗೆ ನೋಟಿಸ್‌

Published:
Updated:

ಬೆಂಗಳೂರು: ಬಹುಮಹಡಿ ಕಟ್ಟಡಗಳ ಮಹಡಿಯಲ್ಲಿ ನಿರ್ಮಿಸಿರುವ 57 ಪಬ್‌ ಹಾಗೂ ರೆಸ್ಟೋರೆಂಟ್‌ಗಳನ್ನು ಬಂದ್ ಮಾಡಿಸಲು ಮುಂದಾಗಿರುವ ಬಿಬಿಎಂಪಿ, ಅಂಥ ಕಟ್ಟಡಗಳ ಮಾಲೀಕರಿಗೆ ನೋಟಿಸ್‌ ನೀಡಿದೆ.

ಪಬ್‌, ರೆಸ್ಟೋರೆಂಟ್‌ಗಳಿಗೆ ಇತ್ತೀಚೆಗೆ ಭೇಟಿ ನೀಡಿದ್ದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಅಧಿಕಾರಿಗಳು, ಅಗ್ನಿ ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದ್ದರು. ಸುರಕ್ಷತಾ ಕ್ರಮಗಳಿಲ್ಲದ ಪಬ್‌ ಹಾಗೂ ರೆಸ್ಟೋರೆಂಟ್‌ಗಳಿಗೆ ನೋಟಿಸ್‌ ನೀಡಿದ್ದರು. ಬಿಬಿಎಂಪಿ ಸಹ ಕಾರ್ಯಾಚರಣೆ ನಡೆಸಿ ಅವುಗಳ ಮೇಲೆ ಕ್ರಮ ಜರುಗಿಸಿದೆ.

ಹಲವು ಪಬ್‌ಗಳು ನಿಯಮಬಾಹಿರವಾಗಿ ವಾಣಿಜ್ಯ ಚಟುವಟಿಕೆ ನಡೆಸುತ್ತಿವೆ. ಇದರಿಂದ ಪಾಲಿಕೆಗೆ ನಷ್ಟ ಉಂಟಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು, ಬಾಣಸವಾಡಿಯ ‘ಇಟರೀ’ ಹಾಗೂ ‘ಒನ್‌ಸ್ಟಾ’ ಪಬ್‌ಗಳಿಗೆ ಭೇಟಿ ನೀಡಿ ಅಕ್ರಮ ಪತ್ತೆ ಹಚ್ಚಿದ್ದರು. ಅವುಗಳಿಗೆ ತಲಾ ₹5 ಲಕ್ಷ ದಂಡ ವಿಧಿಸಿ, ಆ ಎರಡೂ ಪಬ್‌ ಬಂದ್‌ ಮಾಡಲು ನೋಟಿಸ್ ಕೊಟ್ಟಿದ್ದಾರೆ.

‘ಬಹುಮಹಡಿ ಕಟ್ಟಡಗಳ ಮಹಡಿಯಲ್ಲಿರುವ ಇವು ನಿಯಮಗಳನ್ನು ಉಲ್ಲಂಘಿಸುತ್ತಿವೆ. ಮುಂಬೈನಲ್ಲಿ ಜರುಗಿದ ಘಟನೆ, ನಮ್ಮಲ್ಲಿ ಸಂಭವಿಸಬಾರದೆಂದು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ’ ಎಂದು ಮೇಯರ್‌ ಆರ್‌. ಸಂಪತ್‌ ರಾಜ್‌ ಹೇಳಿದರು.

ಬಿಬಿಎಂಪಿ ವಲಯ ಆರೋಗ್ಯಾಧಿಕಾರಿ ಡಾ. ಸಿದ್ಧಪ್ಪಾಜಿ, ‘ಇವುಗಳಿಗೆ ವಾಣಿಜ್ಯ ಪರವಾನಗಿ ಇಲ್ಲ. ಏಳು ದಿನಗಳಲ್ಲಿ ಬಂದ್‌ ಮಾಡುವಂತೆ ನೋಟಿಸ್‌ ಕೊಟ್ಟಿದ್ದೇವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry