ಗುರುವಾರ , ಆಗಸ್ಟ್ 13, 2020
26 °C

ಐಶ್ವರ್ಯಾ ರೈ ಸಂಭಾವನೆ ₹10 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಐಶ್ವರ್ಯಾ ರೈ ಸಂಭಾವನೆ ₹10 ಕೋಟಿ

ಒಂದಷ್ಟು ವರ್ಷ ಬ್ರೇಕ್‌ ಪಡೆದು ಸಿನಿಕ್ಷೇತ್ರ ಪ್ರವೇಶಿಸಿದರೂ, ಅವಕಾಶಗಳ ಕೊರತೆ ಕಾಣದವರು ನಟಿ ಐಶ್ವರ್ಯಾ ರೈ. ಈ ನೀಲಿ ಕಂಗಳ ಚೆಲುವೆ ತಮ್ಮ ಮುಂದಿನ ಸಿನಿಮಾಕ್ಕಾಗಿ ಬರೋಬ್ಬರಿ ₹10 ಕೋಟಿ ಸಂಭಾವನೆಗೆ ಬೇಡಿಕೆಯಿಟ್ಟಿದ್ದಾರೆ.

1967ರಲ್ಲಿ ತೆರೆಕಂಡಿದ್ದ ‘ರಾತ್‌ ಔರ್‌ ದಿನ್‌’ ಸಿನಿಮಾವನ್ನು ಮತ್ತೆ ಹೊಸ ರೂಪದೊಂದಿಗೆ ತೆರೆಗೆ ತರಲು ನಿರ್ಮಾಪಕಿ ಪ್ರೇರಣಾ ಅರೋರ ಸಿದ್ಧತೆ ನಡೆಸಿದ್ದಾರೆ. ಹಿಂದೆ ನರ್ಗೀಸ್‌ ನಟಿಸಿದ್ದ ಪಾತ್ರಕ್ಕೆ ಈಗ ಐಶ್ವರ್ಯಾ ಬಣ್ಣ ಹಚ್ಚಲಿದ್ದಾರೆ. ಈ ಮೂಲಕ ತಮ್ಮನ್ನು ದ್ವಿಪಾತ್ರದಲ್ಲಿ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಕ್ಕಿದೆ ಎಂಬ ಮಾಹಿತಿಯನ್ನೂ ಅವರೇ ಬಹಿರಂಗಪಡಿಸಿದ್ದಾರೆ.

ಈ ಸಿನಿಮಾ ಮತ್ತಷ್ಟು ಸುದ್ದಿ ಆಗಲು ಕಾರಣವಾಗಿರುವುದು ಐಶ್ವರ್ಯಾ ಅವರ  ಬೇಡಿಕೆ ಇಟ್ಟಿರುವ ಸಂಭಾವನೆಯಿಂದ. ಆದರೆ ಅವರ ಬೇಡಿಕೆಗೆ ಚಿತ್ರತಂಡ ಒಂದು ಕ್ಷಣವೂ ಯೋಚಿಸದೆ ಒಪ್ಪಿಗೆ ನೀಡಿದೆ. ಸದ್ಯ ಐಶ್ವರ್ಯಾ ಅತುಲ್‌ ಮುಖರ್ಜಿ ನಿರ್ದೇಶನದ  ‘ಫನ್ನೇ ಖಾನ್‌’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಅನಿಲ್‌ ಕಪೂರ್ ಮತ್ತು ರಾಜ್‌ಕುಮಾರ್ ರಾವ್ ಅವರೊಂದಿಗೆ ಐಶ್ವರ್ಯಾ ನಟಿಸಿದ್ದು, ಚಿತ್ರ ಜೂನ್‌ನಲ್ಲಿ ಬಿಡುಗಡೆಯಾಗಲಿದೆ. ಸಲ್ಮಾನ್‌ ಖಾನ್ ಅಭಿನಯದ ‘ರೇಸ್ 3’ ಕೂಡ ಅದೇ ಸಮಯದಲ್ಲಿ ತೆರೆಕಾಣಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.