ಬುಧವಾರ, ಆಗಸ್ಟ್ 5, 2020
21 °C

ಕೋಲ್ಸ್‌ ಕ್ಲಬ್‌ ತಂಡಕ್ಕೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಸ್‌ ಕ್ಲಬ್‌ ತಂಡಕ್ಕೆ ಪ್ರಶಸ್ತಿ

ಬೆಂಗಳೂರು: ಸೈಯದ್‌ ನೂರುದ್ದೀನ್‌ (62ಕ್ಕೆ9) ಮತ್ತು ಆರ್‌.ಮಧುಸೂದನ್‌ (88ಕ್ಕೆ7) ಅವರ ಪರಿಣಾಮಕಾರಿ ಬೌಲಿಂಗ್‌ ಬಲದಿಂದ ಕೋಲ್ಸ್‌ ಕ್ಲಬ್‌ ತಂಡ ಜೆ.ಬಿ.ಮಲ್ಲಾರಾಧ್ಯ ಶೀಲ್ಡ್‌ಗಾಗಿ ನಡೆದ ಕೆಎಸ್‌ಸಿಎ ಗುಂಪು–1, ಡಿವಿ ಷನ್‌–5ರ ಲೀಗ್‌ ಮತ್ತು ನಾಕೌಟ್‌ ಕ್ರಿಕೆಟ್‌ ಟೂರ್ನಿಯಲ್ಲಿ ಪ್ರಶಸ್ತಿ ಎತ್ತಿಹಿಡಿದಿದೆ.

ಗ್ರೀನ್‌ ಸ್ಪೋರ್ಟ್ಸ್‌ ವಿಲೇಜ್‌ನಲ್ಲಿ ನಡೆದ ಫೈನಲ್‌ ಹೋರಾಟದಲ್ಲಿ ಕೋಲ್ಸ್‌ ತಂಡ 5 ವಿಕೆಟ್‌ಗಳಿಂದ ಬ್ಲೂ ಡೈಮಂಡ್‌ ಕ್ರಿಕೆಟರ್ಸ್‌ ವಿರುದ್ಧ ಗೆದ್ದಿತು.

ಮೊದಲು ಬ್ಯಾಟ್‌ ಮಾಡಿದ್ದ ಡೈಮಂಡ್‌ ಕ್ರಿಕೆಟರ್ಸ್‌ ಮೊದಲ ಇನಿಂಗ್ಸ್‌ನಲ್ಲಿ 40.3 ಓವರ್‌ಗಳಲ್ಲಿ 159ರನ್ ಗಳಿಸಿತು. ಈ ತಂಡದ ಯಶ್‌ 46ರನ್‌ ಬಾರಿಸಿದರು.

ಕೋಲ್ಸ್ ಕ್ಲಬ್‌, ‍ಪ್ರಥಮ ಇನಿಂಗ್ಸ್‌ನಲ್ಲಿ 51.2 ಓವರ್‌ಗಳಲ್ಲಿ 147 ರನ್‌ಗಳಿಗೆ ಆಲೌಟ್‌ ಆಯಿತು. ದ್ವಿತೀಯ ಇನಿಂಗ್ಸ್‌ ಶುರುಮಾಡಿದ ಡೈಮಂಡ್‌ ಕ್ರಿಕೆಟರ್ಸ್‌ 27.2 ಓವರ್‌ಗಳಲ್ಲಿ 102 ರನ್‌ಗಳಿಗೆ ಹೋರಾಟ ಮುಗಿಸಿತು. 114ರನ್‌ಗಳ ಗುರಿ ಬೆನ್ನಟ್ಟಿದ ಕೋಲ್ಸ್ ಕ್ಲಬ್‌ 27.2 ಓವರ್‌ಗಳಲ್ಲಿ 5 ವಿಕೆಟ್‌ ಕಳೆ ದುಕೊಂಡು ಗೆಲುವಿನ ದಡ ಸೇರಿದರು.

ಸಂಕ್ಷಿಪ್ತ ಸ್ಕೋರ್‌: ಬ್ಲೂ ಡೈಮಂಡ್‌ ಕ್ರಿಕೆಟರ್ಸ್‌: ಮೊದಲ ಇನಿಂಗ್ಸ್‌: 40.3 ಓವರ್‌ಗಳಲ್ಲಿ 159 (ಯಶ್‌ 46, ಆದಿತ್ಯ ಶ್ರೀನಿವಾಸ್‌ 24, ಸಾಗರ್‌ 39; ಆರ್‌.ಮಧುಸೂದನ್‌ 37ಕ್ಕೆ3, ಸೈಯದ್‌ ನೂರುದ್ದೀನ್‌ 27ಕ್ಕೆ5). ಮತ್ತು 27.2 ಓವರ್‌ಗಳಲ್ಲಿ 102 (ವಿಜಯ್‌ ಭಾರದ್ವಾಜ್‌ 34; ಆರ್‌.ಮಧುಸೂದನ್‌ 51ಕ್ಕೆ4, ಸೈಯದ್‌ ನೂರುದ್ದೀನ್‌ 35ಕ್ಕೆ4).

ಕೋಲ್ಸ್ ಕ್ರಿಕೆಟ್‌ ಕ್ಲಬ್‌: ಪ್ರಥಮ ಇನಿಂಗ್ಸ್‌: 51.2 ಓವರ್‌ಗಳಲ್ಲಿ 147 (ಎಂ.ವೆಂಕಟೇಶ್‌ 26, ರೂಪೇಶ್‌ ಔಟಾಗದೆ 35, ಆರ್‌.ಮಧುಸೂದನ್‌ 27; ಯಶ್‌ 17ಕ್ಕೆ2, ಎಂ.ಪಿ.ವಿವೇಕ್‌ 39ಕ್ಕೆ2, ವಿಸ್ಮೃತ್‌ ದೇವ್‌ 14ಕ್ಕೆ2, ಶ್ರೀನಿವಾಸ್‌ ಮೂರ್ತಿ 54ಕ್ಕೆ3). ಮತ್ತು 27.2 ಓವರ್‌ಗಳಲ್ಲಿ 5 ವಿಕೆಟ್‌ಗೆ 115 (ಎಂ.ವೆಂಕಟೇಶ್‌ 24 ; ಶ್ರೀನಿವಾಸ್‌ ಮೂರ್ತಿ 44ಕ್ಕೆ4). ಫಲಿತಾಂಶ: ಕೋಲ್ಸ್ ತಂಡಕ್ಕೆ 5 ವಿಕೆಟ್‌ ಗೆಲುವು ಹಾಗೂ ಪ್ರಶಸ್ತಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.