ರೂಫ್‌ ಟಾಪ್‌:‌ ಬಂದ್‌ಗೆ ನೋಟಿಸ್‌

7

ರೂಫ್‌ ಟಾಪ್‌:‌ ಬಂದ್‌ಗೆ ನೋಟಿಸ್‌

Published:
Updated:

ಬೆಂಗಳೂರು: ಜಯನಗರ 4ನೇ ಹಂತದಲ್ಲಿರುವ ಕೇಕ್‌ವಾಲಾ ಸೇರಿದಂತೆ ನಾಲ್ಕು ರೂಫ್‌ ಟಾಪ್‌ ಬಾರ್‌ಗಳನ್ನು ಬಂದ್‌ ಮಾಡುವಂತೆ ಬಿಬಿಎಂಪಿ ಅಧಿಕಾರಿಗಳು ನೋಟಿಸ್‌ ನೀಡಿದ್ದಾರೆ.

ನಗರದ ಹಲವು ರೂಫ್‌ ಟಾಪ್‌ ಮಳಿಗೆಗಳಿಗೆ ಶುಕ್ರವಾರ ಭೇಟಿ ನೀಡಿದ್ದ ಬಿಬಿಎಂಪಿ ಸದಸ್ಯರು ಹಾಗೂ ಅಧಿಕಾರಿಗಳು, ನಿಯಮ ಉಲ್ಲಂಘನೆಪತ್ತೆ ಹಚ್ಚಿದರು. ಗ್ರಿಲ್ ಸ್ಕ್ಯೂರ್‌, ಬಿಬಿಕ್ಯೂ, ಒನ್ಸ್‌ ಓಪನ್‌ ರೂಫ್‌ ಟಾಪ್‌ ಬಾರ್‌ಗಳಿಗೂ ನೋಟಿಸ್ ನೀಡಿದರು.

‘ಕಟ್ಟಡ ನಿರ್ಮಾಣ ಯೋಜನೆಯ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ನಗರದ ಹಲವು ರೂಫ್‌ ಟಾಪ್‌ ಪಬ್‌, ಬಾರ್‌, ರೆಸ್ಟೋರೆಂಟ್‌ ಗಳನ್ನು ಬಂದ್‌ ಮಾಡುವಂತೆ ನೋಟಿಸ್‌ ಕೊಟ್ಟಿದ್ದೇವೆ. ದಂಡವನ್ನೂ ವಿಧಿಸಿದ್ದೇವೆ’ ಎಂದು ಅಧಿಕಾರಿಗಳು

ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry