ಫೈನಲ್‌ಗೆ ಸಿಮೋನಾ ಹಲೆಪ್‌

7

ಫೈನಲ್‌ಗೆ ಸಿಮೋನಾ ಹಲೆಪ್‌

Published:
Updated:

ಶೆಂಜೆನ್‌: ರುಮೇನಿಯಾದ ಆಟಗಾರ್ತಿ ಸಿಮೊನಾ ಹಲೆಪ್‌, ಶೆಂಜೆನ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ.

ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಸಿಮೊನಾ 6–1, 6–4ರ ನೇರ ಸೆಟ್‌ಗಳಿಂದ ತಮ್ಮದೇ ದೇಶದ ಇರಿನಾ ಕ್ಯಾಮೆಲಿಯಾ ಬೆಗು ಅವರನ್ನು ಸೋಲಿಸಿದರು.

ಫೈನಲ್‌ನಲ್ಲಿ ಹಲೆಪ್‌, ಜೆಕ್‌ ಗಣರಾಜ್ಯದ ಕ್ಯಾಥರಿನಾ ಸಿನಿಯಾಕೊವಾ ವಿರುದ್ಧ ಆಡಲಿದ್ದಾರೆ.

ನಾಲ್ಕರ ಘಟ್ಟದ ಇನ್ನೊಂದು ಹೋರಾಟದಲ್ಲಿ ಕ್ಯಾಥರಿನಾ 6–2, 3–6, 6–3ರಲ್ಲಿ ರಷ್ಯಾದ ಮರಿಯಾ ಶರಪೋವಾ ವಿರುದ್ಧ ಗೆದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry