ಶಿರಸಿ: ಸುಗಮ ಸಂಗೀತ ಪರಿಷತ್‌ನ ರಾಜ್ಯಮಟ್ಟದ 15ನೇ ಸಮ್ಮೇಳನದ 'ಕಾವ್ಯ ದಿಬ್ಬಣ' ಮೆರವಣಿಗೆಗೆ ನಗರಸಭೆ ಅಧ್ಯಕ್ಷ ಪ್ರದೀಪ ಶೆಟ್ಟಿ ಶನಿವಾರ ಚಾಲನೆ ನೀಡಿದರು.

ಮಾರಿಕಾಂಬಾ ದೇವಾಲಯದ ಎದುರು ನೂರಾರು ಕಲಾವಿದರ ಸಮ್ಮುಖದಲ್ಲಿ ಕಾವ್ಯ ದಿಬ್ಬಣಕ್ಕೆ ಚಾಲನೆ ನೀಡಲಾಯಿತು.

ಈ ವೇಳೆ ನಾಡಿನ ಸಂಸ್ಕೃತಿ ಬಿಂಬಿಸುವ ಡೊಳ್ಳು ಕುಣಿತ, ಯಕ್ಷಗಾನ, ಕುಚಿಪುಡಿ ನೃತ್ಯಗಳು ಗಮನ ಸೆಳೆದವು.

ಹಿಂದೂಸ್ತಾನಿ ಗಾಯಕ ಹಾಸಣಗಿ ಗಣಪತಿ ಭಟ್ಟ, ಸುಗಮ ಸಂಗೀತ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಕಿಕ್ಕೇರಿ ಕೃಷ್ಣಮೂರ್ತಿ, ಸಮ್ಮೇಳನದ ಅಧ್ಯಕ್ಷೆ ಎಂ.ಕೆ.ಜಯಶ್ರೀ, ಎಚ್.ಎಸ್.ವೆಂಕಟೇಶಮೂರ್ತಿ ಮೆರವಣಿಗೆಯಲ್ಲಿ ಇದ್ದರು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿತು.

ಸುಗಮ ಸಂಗೀತ ಸಮ್ಮೇಳನದಲ್ಲಿ ಸಹಸ್ರಕಂಠಗಳಿಂದ ನಾಡಗೀತೆ ಗಾಯನ ನಡೆಯಿತು. ಲಯನ್ಸ್ ಶಾಲೆ, ಮಂಚಿಕೇರಿ ರಾಜರಾಜೇಶ್ವರಿ ಶಾಲೆ, ಎಂಇಎಸ್ ಶಾಲೆ, ಮಾರಿಕಾಂಬಾ ಪ್ರೌಢಶಾಲೆ, ಉಂಚಳ್ಳಿ, ಯಡಳ್ಳಿ, ಓಣಿಕೇರಿ ಶಾಲೆಯ 1000 ವಿದ್ಯಾರ್ಥಿಗಳು ಭಾಗಿಯಾದರು. ಗಾಯಕಿ ಬಿ.ಕೆ. ಸುಮಿತ್ರಾ, ಬಿ.ವಿ.ಶ್ರೀನಿವಾಸ ಅವರಿಂದ ಈ ಮಕ್ಕಳು ತರಬೇತಿ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.