ಸೋಮವಾರ, ಜೂಲೈ 6, 2020
21 °C

ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ ಅನುಮಾನ: ನಕ್ಸಲರಿಂದ ಸರಪಂಚ್‌ ಹತ್ಯೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ ಅನುಮಾನ: ನಕ್ಸಲರಿಂದ ಸರಪಂಚ್‌ ಹತ್ಯೆ

ಧರ್ಬಾ: ತಮ್ಮ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ ಅನುಮಾನದಿಂದ ಇಲ್ಲಿನ ಸರಪಂಚ್‌ ಅನ್ನು ನಕ್ಸಲರು ಹತ್ಯೆ ಮಾಡಿದ್ದಾರೆ. ಧರ್ಬಾ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಂದ್ರು ಹತ್ಯೆಯಾದವರು.

ನಕ್ಸಲರಿಂದ ಪ್ರಾಣ ಬೆದರಿಕೆ ಇದ್ದ ಕಾರಣ ಭದ್ರತಾ ಶಿಬಿರದಲ್ಲಿ ಉಳಿದುಕೊಳ್ಳುವಂತೆ ಪೊಲೀಸರು ನೀಡಿದ್ದ ಸಲಹೆಯನ್ನು ಪಂದ್ರು ನಿರಾಕರಿಸಿದ್ದ ಎನ್ನಲಾಗಿದೆ.

ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ಬಸ್ತಾರ್‌ ಜಿಲ್ಲೆಯ ಸೂಪರಿಂಟೆಂಡೆಂಟ್ ಆಫ್‌ ಪೊಲೀಸ್‌ ಆರೀಫ್‌ ಶೇಖ್‌, ‘ಕೊಲೆಂಗ್‌ ಶಿಬಿರದಲ್ಲಿ ಉಳಿದುಕೊಳ್ಳುವಂತೆ ನೀಡಿದ್ದ ಸಲಹೆಯನ್ನು ಪಂದ್ರು ನಿರಾಕರಿಸಿದ್ದ. ಹೀಗಾಗಿ ನಕ್ಸಲರು ಕೊಲೆ ಮಾಡಿದ್ದಾರೆ’ ಎಂದು ಹೇಳಿದ್ದಾರೆ.

ಜಿಲ್ಲಾ ಮೀಸಲು ಪಡೆ(ಡಿಆರ್‌ಜಿ) ಕೊಲೆಂಗ್‌ ಶಿಬಿರದಿಂದ ವಾಪಸ್‌ ಆಗಿದ್ದು, ಕೇಂದ್ರೀಯ ಮೀಸಲು ಪೊಲೀಸ್‌ ಪಡೆ(ಸಿಆರ್‌ಪಿಎಫ್‌) ಜತೆ ಕಾರ್ಯ ನಿರ್ವಹಿಸಲಿದೆ. ಪೊಲೀಸರು ಹಾಗೂ ಭದ್ರತಾ ಪಡೆಗಳು ಜಂಟಿಯಾಗಿ ನಕ್ಸಲರ ವಿರುದ್ಧ ಕ್ಷಿಪ್ರ ಕಾರ್ಯಾಚರಣೆ ನಡೆಸಲಿವೆ ಎಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.