ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌: ಎಲಿನಾ ಸ್ವಿಟೋಲಿನಾಗೆ ಪ್ರಶಸ್ತಿಯ ಗರಿ

Last Updated 6 ಜನವರಿ 2018, 19:30 IST
ಅಕ್ಷರ ಗಾತ್ರ

ಬ್ರಿಸ್ಬೇನ್‌, ಆಸ್ಟ್ರೇಲಿಯಾ: ಉಕ್ರೇನ್‌ ಆಟಗಾರ್ತಿ ಎಲಿನಾ ಸ್ವಿಟೋಲಿನಾ ಬ್ರಿಸ್ಬೇನ್‌ ಟೆನಿಸ್ ಟೂರ್ನಿ ಯಲ್ಲಿ ಶನಿವಾರ ಚಾಂಪಿಯನ್ ಆಗಿದ್ದಾರೆ.

ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್‌ ಪೈಪೋಟಿಯಲ್ಲಿ ಎಲಿನಾ 6–2, 6–1ರಲ್ಲಿ ನೇರ ಸೆಟ್‌ಗಳಿಂದ ಬೆಲಾರಸ್‌ನ ಅಲೆಕ್ಸಾಂಡ್ರ ಸಸ್ನೊವಿಕ್ ಅವರನ್ನು ಮಣಿಸಿದರು. ಎಲಿನಾ 2017ರಲ್ಲಿ ಐದು ಡಬ್ಲ್ಯುಟಿಎ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ವರ್ಷದ ಮೊದಲ ಗ್ರ್ಯಾಂಡ್‌ಸ್ಲಾಮ್‌ ಆಸ್ಟ್ರೇಲಿಯಾ ಓಪನ್‌ನಲ್ಲಿ ಅವರು ನಾಲ್ಕನೇ ರ‍್ಯಾಂಕಿಂಗ್‌ ಆಟಗಾರ್ತಿಯಾಗಿ ಕಣಕ್ಕಿಳಿಯುವರು.

ಸ್ವಿಟೋಲಿನಾ ಆರಂಭದಲ್ಲಿಯೇ 3–1ರಲ್ಲಿ ಸಸ್ನೊವಿಕ್ ವಿರುದ್ಧ ಮುನ್ನಡೆ ಗಳಿಸಿದರು.

ಎದುರಾಳಿಗೆ ಪಾಯಿಂಟ್ಸ್ ಪಡೆಯಲು ಎಲ್ಲಿಯೂ ಅವಕಾಶ ನೀಡಲಿಲ್ಲ. ಕೇವಲ ಎರಡು ಗೇಮ್‌ ಮಾತ್ರ ಸೋತರು.

ಎರಡನೇ ಸೆಟ್‌ನಲ್ಲಿ ಒಂದು ಗೇಮ್‌ ಮಾತ್ರ ಬಿಟ್ಟುಕೊಡುವ ಮೂಲಕ ಜಯಭೇರಿ ಬಾರಿಸಿದರು.

ಬೆಲಾರಸ್‌ನ ಆಟಗಾರ್ತಿ ಪಂದ್ಯದ ಆರಂಭದಿಂದ ಕೊನೆಯವರೆಗೂ ಒತ್ತಡದಲ್ಲಿಯೇ ಆಡಿದರು. ಸರ್ವ್ ಹಾಗೂ ರಿಟರ್ನ್ಸ್‌ಗಳ ವೇಳೆ ಅವರು ನಿಖರವಾಗಿ ಆಡುವಲ್ಲಿ ಹಿಂದೆ ಉಳಿದರು. ಎರಡನೇ ಸೆಟ್‌ನಲ್ಲಿ 5–0ರಲ್ಲಿ ಮುಂದಿದ್ದ ಎಲಿನಾ ಕೊನೆಯಲ್ಲಿ ಒಂದು ಗೇಮ್ ಮಾತ್ರ ಸೋತರು. 65 ನಿಮಿಷಗಳ ಹೋರಾಟದಲ್ಲಿ ಎಲಿನಾ ತಮ್ಮ ಹತ್ತನೇ ಪ್ರಶಸ್ತಿ ಎತ್ತಿಹಿಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT