ಶನಿವಾರ, ಜೂಲೈ 4, 2020
21 °C

9ರಿಂದ ಜೂನಿಯರ್ ರಾಷ್ಟ್ರೀಯ ಫೆನ್ಸಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇಲ್ಲಿಯ ಕೋರಮಂಗಲ ಕ್ರೀಡಾಂಗಣದಲ್ಲಿ ಜನವರಿ 9 ರಿಂದ 12ರವರೆಗೆ 25ನೇ ಜೂನಿಯರ್‌ ರಾಷ್ಟ್ರೀಯ ಫೆನ್ಸಿಂಗ್ ಚಾಂಪಿಯನ್‌ಷಿಪ್ ನಡೆಯಲಿದೆ.

ಭಾರತ ಫೆನ್ಸಿಂಗ್ ಸಂಸ್ಥೆ ಹಾಗೂ ಕರ್ನಾಟಕ ಫೆನ್ಸಿಂಗ್‌ ಅಸೋಸಿಯೇಷನ್ ಜಂಟಿಯಾಗಿ ಟೂರ್ನಿಯನ್ನು ಆಯೋಜಿಸಲಿವೆ. 28 ರಾಜ್ಯಗಳ 600ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಲಿದ್ದಾರೆ.

ಫಾಯಿಲ್‌, ಸಬರೆ ಹಾಗೂ ಇಪೀ ಸೇರಿದಂತೆ ಮೂರು ಮಾದರಿಯ ವೈಯಕ್ತಿಕ ಹಾಗೂ ತಂಡ ವಿಭಾಗಗಳಲ್ಲಿ ಟೂರ್ನಿ ಆಯೋಜನೆಗೊಂಡಿದೆ. ಈ ಟೂರ್ನಿಯಲ್ಲಿ ಸ್ಪರ್ಧಿಸಲಿರುವ ಕರ್ನಾಟಕದ ಜೂನಿಯರ್ ಪುರುಷರು ಹಾಗೂ ಮಹಿಳೆಯರ ತಂಡಗಳನ್ನು ಶನಿವಾರ ಪ್ರಕಟಿಸಲಾಗಿದೆ.

ತಂಡಗಳು ಇಂತಿವೆ: ಬಾಲಕರು: ಫಾಯಿಲ್‌: ನಗಂಬ ಇರೊಮ್‌, ವಿ.ಹಿತೇಶ, ನಿಖಿಲ್‌, ಎಸ್‌.ಎಮ್‌. ಸಾತ್ವಿಕ್‌. ಇಪೀ: ಕೆ.ಆರ್.ಸಚಿನ್‌, ಎಮ್‌.ಎನ್‌.ಮನೋಜ್‌, ಜ್ಞಾನಾನಂದ, ಆರ್.ರಂಜನ್‌. ಸಬರೆ: ಕೆ.ಪಿ ಅಯ್ಯಪ್ಪ, ಪ್ರಮಾತ್‌ ಗಿರೀಶ್‌, ಪಿ.ಎ.ಧನುಷ್‌, ಬಿ.ಆರ್‌ ಸುಹಾಸ್‌.

ವೈಯಕ್ತಿಕ ವಿಭಾಗ: ಫಾಯಿಲ್‌: ನಗಂಬ ಇರೊಮ್‌, ವಿ.ಹಿತೇಶ. ಇಪೀ: ಕೆ.ಆರ್.ಸಚಿನ್‌, ಎಮ್‌.ಎನ್‌.ಮನೋಜ್‌. ಸಬರೆ: ಕೆ.ಪಿ ಅಯ್ಯಪ್ಪ, ಪ್ರಮಾತ್ ಗಿರೀಶ್‌.

ಬಾಲಕಿಯರು: ಫಾಯಿಲ್‌: ಸುನೈನಾ ರಾಜು, ಯು.ಎಸ್‌.ಗೌತಮಿ, ಸಯೇದಾ, ಬಿಂದು ರಾಜ್‌.

ಇಪೀ: ಶ್ರೀನಿಧಿ, ಪಿ. ನೈದಲೆ, ಜಿ.ಎಸ್‌.ಮಹಿಮಾ, ಆರ್‌.ಶ್ರೀವಿದ್ಯಾ. ಸಬರೆ: ಪಿ.ರಿತಿಕಾ, ಡಿ.ಎಸ್‌.ಪ್ರೀತಾ, ಬಿ.ಜಿ.ಮನೀಷ, ಎಸ್‌.ಬಿ ಮಮತಾ. ವೈಯಕ್ತಿಕ: ಫಾಯಿಲ್‌: ಸುನೈನಾ ರಾಜು, ಗೌತಮಿ, ನೈದಲೆ. ಸಬರೆ: ರಿತಿಕಾ, ಪ್ರೀತಾ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.