ಅಂಧರ ವಿಶ್ವಕಪ್ ಕ್ರಿಕೆಟ್ ನಾಳೆಯಿಂದ

7

ಅಂಧರ ವಿಶ್ವಕಪ್ ಕ್ರಿಕೆಟ್ ನಾಳೆಯಿಂದ

Published:
Updated:
ಅಂಧರ ವಿಶ್ವಕಪ್ ಕ್ರಿಕೆಟ್ ನಾಳೆಯಿಂದ

ನವದೆಹಲಿ: ಅಂಧರ ವಿಶ್ವಕಪ್‌ ಕ್ರಿಕೆಟ್ ಟೂರ್ನಿಯ ಉದ್ಘಾಟನಾ ಸಮಾರಂಭ ಪಾಕಿಸ್ತಾನ ಮತ್ತು ಯುಎಇನಲ್ಲಿ ಭಾನುವಾರ ನಡೆಯಲಿದೆ. ಪಂದ್ಯಗಳು ಎಂಟರಂದು ಆರಂಭಗೊಳ್ಳಲಿದೆ.

ಭಾರತ ತಂಡದ ಮೊದಲ ಪಂದ್ಯ ಎಂಟರಂದು ನಡೆಯಲಿದೆ. ಪಾಕಿಸ್ತಾನದಲ್ಲಿ ಆಡಲು ಸರ್ಕಾರ ಅನುಮತಿ ನೀಡದ ಕಾರಣ ಭಾರತ ತಂಡದ ಎಲ್ಲ ಪಂದ್ಯಗಳನ್ನು ದುಬೈನ ಅಜ್ಮಾನ್‌ ಕ್ರೀಡಾಂಗಣದಲ್ಲಿ ಆಡಲಿದ್ದು ಶನಿವಾರ ಅಲ್ಲಿಗೆ ತೆರಳಿದೆ. ಭದ್ರತೆಯ ಕಾರಣದಿಂದ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಕೂಡ ಪಾಕಿಸ್ತಾನದಲ್ಲಿ ಆಡದೇ ಇರಲು ನಿರ್ಧರಿಸಿವೆ.

ಅಂಧರ ಕ್ರಿಕೆಟ್ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸುವ ವಿಷಯದಲ್ಲಿ ಭಾರತದ ವಿದೇಶಾಂಗ ಸಚಿವಾಲಯ ಮೌನ ವಹಿಸಿದೆ ಎಂದು ದೂರಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇದು ಬೇಸರದ ಸಂಗತಿ ಎಂದು ಹೇಳಿದೆ.

ಏಳರಂದು ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ ತಂಡ ಬಾಂಗ್ಲಾದೇಶವನ್ನು ಎದುರಿಸಲಿದೆ. ಭಾರತದ ಮೊದಲ ಪಂದ್ಯ ಆಸ್ಟ್ರೇಲಿಯಾ ವಿರುದ್ಧ ನಡೆಯಲಿದೆ. 21ರಂದು ಟೂರ್ನಿ ಮುಕ್ತಾಯಗೊಳ್ಳಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry