ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವರ ವಿರುದ್ಧ ಮಾನನಷ್ಟ ಮೊಕದ್ದಮೆ

Last Updated 6 ಜನವರಿ 2018, 19:30 IST
ಅಕ್ಷರ ಗಾತ್ರ

ಲಾಹೋರ್‌: ಜಮಾತ್‌ –ಉದ್‌–ದುವಾ ಸಂಘಟನೆಗೆ ದೇಣಿಗೆ ಸಂಗ್ರಹಿಸದಂತೆ ನಿಷೇಧ ಹೇರಿರುವ ಬೆನ್ನಲ್ಲೇ ಸಂಘಟನೆಯ ಮುಖ್ಯಸ್ಥ, ಮುಂಬೈ ದಾಳಿಯ ರೂವಾರಿ, ಹಫೀಜ್ ಸಯೀದ್‌, ರಕ್ಷಣಾ ಸಚಿವ ಖುರ‍್ರಮ್‌ ದಸ್ತಗಿರ್‌ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾನೆ. ತನ್ನ ಮಾನಹಾನಿ ಮಾಡಿದುದಕ್ಕೆ ₹10ಕೋಟಿ ಪರಿಹಾರ ನೀಡಬೇಕು ಕೋರಿದ್ದಾನೆ. ‘ಭಯೋತ್ಪಾದಕರಿಗೆ ಇಸ್ಲಾಮಾಬಾದ್‌ ಸ್ವರ್ಗವಾಗಿದೆ’ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್‌ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಪಾಕ್‌ ಎರಡು ದಿನಗಳ ಹಿಂದೆಯಷ್ಟೇ ಕೆಲವು ಸಂಘಟನೆಗಳಿಗೆ ದೇಣಿಗೆ ಸಂಗ್ರಹಿಸದಂತೆ ನಿಷೇಧ ಹೇರಿತ್ತು.

‘ನೋಟಿಸ್‌ ಪಡೆದ ಹದಿನಾಲ್ಕು ದಿನಗಳ ಒಳಗಾಗಿ ಸಯೀದ್‌ಗೆ ಲಿಖಿತ ರೂಪದಲ್ಲಿ ಕ್ಷಮಾಪಣೆ ಕೇಳಬೇಕು. ಭವಿಷ್ಯದಲ್ಲಿ ಜಾಗರೂಕತೆಯಿಂದ ವರ್ತಿಸುವ ಭರವಸೆ ನೀಡಬೇಕು. ಇಲ್ಲದಿದ್ದಲ್ಲಿ ಪಾಕಿಸ್ತಾನ ದಂಡಸಂಹಿತೆ ಕಲಂ 500ರ ಅಡಿಯಲ್ಲಿ ಎರಡು ವರ್ಷಗಳ ಶಿಕ್ಷೆಗೆ ಗುರಿಪಡಿಸುವ ಅವಕಾಶವಿದೆ’ ಎಂದು ಹಫೀಜ್‌ ಪರ ವಕೀಲ ಎ.ಕೆ.ದೊಗರ್‌ ಅವರು  ನೋಟಿಸ್‌ನಲ್ಲಿ ಉಲ್ಲೇಖಿಸಿದ್ದಾರೆ.

ಜೆಯುಡಿಗೆ ಲಷ್ಕರ್‌–ಎ–ತಯ್ಯಿಬಾ ಜೊತೆ ಯಾವುದೇ ಸಂಪರ್ಕವಿಲ್ಲ. ವಿಶ್ವಸಂಸ್ಥೆ ಜೆಡಿಯುವನ್ನು ಉಗ್ರಗಾಮಿ ಸಂಘಟನೆಗಳ ಪಟ್ಟಿಗೆ ಸೇರಿಸಿರು
ವುದು ಕಾನೂನುಬಾಹಿರ ಎಂದು ದೊಗರ್ ಹೇಳಿದ್ದಾರೆ.

ಸಚಿವರು ಬೇಜವಾಬ್ದಾರಿ ಹೇಳಿಕೆ ನೀಡುವ ಮೂಲಕ ಸಯೀದ್‌ ಮತ್ತು ಜೆಡಿಯು ಸಂಘಟನೆಗೆ ಅಪಾರ ಹಾನಿ ಉಂಟು ಮಾಡಿದ್ದಾರೆ ಎಂದು ಹೇಳಿದ್ದಾರೆ.

ಅಮೆರಿಕದ ಒತ್ತಡದಿಂದಾಗಿ ಈ ಸಂಘಟನೆಗಳಿಗೆ ನಿಷೇಧ ಹೇರಿದ್ದಲ್ಲ. ಆದರೆ ಗಂಭೀರ ಆರೋಪಗಳು ಬಂದ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಖುರ‍್ರಮ್‌ ಹೇಳಿದ್ದಾರೆ. ಆದರೆ ವಿಶ್ವಸಂಸ್ಥೆ ಪ್ರಕಟಿಸಿದ ಪಟ್ಟಿಯನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT