ಕಾಲುವೆ ಸುರಕ್ಷತೆಗೆ ಒತ್ತು ನೀಡಲು ಒತ್ತಾಯ

7

ಕಾಲುವೆ ಸುರಕ್ಷತೆಗೆ ಒತ್ತು ನೀಡಲು ಒತ್ತಾಯ

Published:
Updated:

ಹುಣಸಗಿ: ‘ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಜೀವನಾಡಿಯಾಗಿರುವ ಮುಖ್ಯ ಕಾಲುವೆಯ ಸುರಕ್ಷತೆಗೆ ನಿಗಮದ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಜೆಡಿಎಸ್ ಮುಖಂಡ ರಾಜಾ ಕೃಷ್ಣಪ್ಪನಾಯಕ ಒತ್ತಾಯಿಸಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ‘ಮೂರು ವರ್ಷಗಳ ಹಿಂದೆಯಷ್ಟೇ ನಿರ್ವಹಿಸಿದ ಕಾಲುವೆ ಕಾಮಗಾರಿ ಕುಸಿದಿರುವುದು ಅನುಮಾನ ಹುಟ್ಟಿಸಿದೆ. ಸುರಪುರ ಮತಕ್ಷೇತ್ರದಲ್ಲಿ ಭೂ ಸೇನಾ ನಿಗಮ ಹಾಗೂ ನಿರ್ಮಿತಿ ಕೇಂದ್ರದ ಅಡಿಯಲ್ಲಿ ನಿರ್ವಹಿಸುತ್ತಿರುವ ಕಾಮಗಾರಿಗಳು ನಿಗದಿತ ಅವಧಿ ಮಗಿದಿದ್ದರೂ ಸಹ ಇನ್ನೂ ಪೂರ್ಣಗೊಂಡಿಲ್ಲ. ಅಲ್ಲದೇ ಕಳಪೆಮಟ್ಟದಿಂದ ಕೂಡಿವೆ. ಈ ಬಗ್ಗೆ ಸಂಬಂಧಿಸಿದ ಹಿರಿಯ ಅಧಿಕಾರಿಗಳಿಗೆ ಹಲವು ಬಾರಿ ತಿಳಿಸಿದ್ದರೂ ಕ್ರಮ ಜರುಗಿಸಿಲ್ಲ’ ಎಂದು ದೂರಿದರು. ‘ಹಿಂಗಾರು ಹಂಗಾಮಿಗೂ ಸಮರ್ಪಕ ನೀರು ಒದಗಿಸಬೇಕು. ಇಲ್ಲ ದಿದ್ದಲ್ಲಿ ಹೋರಾಟ ಅನಿವಾರ್ಯ’ ಎಂದರು.

‘ಸುರಪುರ ಮತಕ್ಷೇತ್ರದ ಬಹುತೇಕ ಗ್ರಾಮಗಳಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸುವಲ್ಲಿ ಆಡಳಿತ ವಿಫಲವಾಗಿದೆ. ರಸ್ತೆಗಳು ಹದೆಗೆಟ್ಟಿವೆ. ಈ ಹಿಂದೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿ ಯಲ್ಲಿ ಕೈಗೊಂಡಿದ್ದ ಕಾಮಗಾರಿಗಳನ್ನು ಜನತೆ ಇಂದಿಗೂ ಸ್ಮರಿಸುತ್ತಿದ್ದಾರೆ. ಸುರಪುರ ಮತಕ್ಷೇತ್ರದಲ್ಲಿ ಜೆಡಿಎಸ್ ಪರ ಗಾಳಿ ಬೀಸುತ್ತಿದೆ. ವರಿಷ್ಠರ ಮಾರ್ಗದರ್ಶನದಲ್ಲಿ ಪಕ್ಷವನ್ನು ಸಂಘ ಟಿಸಲಾಗುವುದು’ ಎಂದು ಹೇಳಿದರು. ಜೆಡಿಎಸ್‌ ಹಿರಿಯ ಮುಖಂಡ ಶಿವಪ್ಪ ಸದಬ, ತಿರುಪತಿ ಮಾಸ್ತರ, ಭೀಮನಗೌಡ ಪಾಟೀಲ ಹೆಬ್ಬಾಳ, ಶಿವುಕುಮಾರ ದೇಸಾಯಿ, ಮಹೇಶ ದೇವರಮನಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry