ಗುರುವಾರ , ಆಗಸ್ಟ್ 13, 2020
27 °C

ಮಂಡಿ ನೋವಿನಿಂದಾಗಿ ನಡೆಯಲು ಕಷ್ಟ ಪಡುತ್ತಿದ್ದಾರೆ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡಿ ನೋವಿನಿಂದಾಗಿ ನಡೆಯಲು ಕಷ್ಟ ಪಡುತ್ತಿದ್ದಾರೆ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ

ಕೊಲಂಬೊ: ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ, ಆಲ್ ರೌಂಡರ್ ಸನತ್ ಜಯಸೂರ್ಯ ಅವರು ವೃತ್ತಿ ಜೀವನದಿಂದ ನಿವೃತ್ತರಾದ ನಂತರ ಹೆಚ್ಚಾಗಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. 'ಮಟಾರಾ ಮರೌದೆಕ್' ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಜಯಸೂರ್ಯ ಶ್ರೀಲಂಕಾ ಕ್ರಿಕೆಟ್‍ ತಂಡದ ಹೊಡೆಬಡಿ ದಾಂಡಿಗರಾಗಿದ್ದರು.

48ರ ಹರೆಯದ ಜಯಸೂರ್ಯ ನಿವೃತ್ತಿ ಹೊಂದಿದ ನಂತರ ಮಂಡಿ ನೋವಿನಿಂದ ಬಳಲುತ್ತಿದ್ದಾರೆ. ಊರುಗೋಲು (crutches) ಇಲ್ಲದೆ ಅವರಿಗೆ ನಡೆಯಲು ಸಾಧ್ಯವಾಗುತ್ತಿಲ್ಲ.

1996ರಲ್ಲಿ ಶ್ರೀಲಂಕಾಕ್ಕೆ ವಿಶ್ವಕಪ್ ಗೆದ್ದುಕೊಟ್ಟ ಪಂದ್ಯಗಳಲ್ಲಿ ಪ್ರಧಾನ ಪಾತ್ರವಹಿಸಿದ್ದ ಜಯಸೂರ್ಯ, ಇದೀಗ ಚಿಕಿತ್ಸೆಗಾಗಿ ಮೆಲ್ಬರ್ನ್‍ಗೆ ಹೋಗಲಿದ್ದಾರೆ. ಒಂದು ತಿಂಗಳ ಕಾಲ ಜಯಸೂರ್ಯ ಚಿಕಿತ್ಸೆಗೊಳಪಡಲಿದ್ದು, ವೈದ್ಯರ ನಿಗಾದಲ್ಲಿರಲಿದ್ದಾರೆ.

ಶ್ರೀಲಂಕಾ ಕ್ರಿಕೆಟ್ ತಂಡದಲ್ಲಿ 2 ದಶಕಗಳ ಕಾಲ ಆಡಿದ್ದ ಜಯಸೂರ್ಯ ತಂಡದ ಬೆನ್ನೆಲುಬು ಆಗಿದ್ದರು. 110 ಟೆಸ್ಟ್ ಪಂದ್ಯ, 445 ಏಕದಿನ ಪಂದ್ಯ ಮತ್ತು 31 ಟಿ20 ಪಂದ್ಯಗಳನ್ನಾಡಿದ್ದಾರೆ ಜಯಸೂರ್ಯ. 28 ಶತಕಗಳು, 68 ಅರ್ಧ ಶತಕಗಳೊಂದಿಗೆ  13,364 ರನ್ ಗಳಿಸಿ 32. 51 ಸರಾಸರಿ ಹೊಂದಿರುವ ಈ ಕ್ರಿಕೆಟಿಗ ಶ್ರೀಲಂಕಾ ಪರವಾಗಿ ಅತೀ ಹೆಚ್ಚು ರನ್‌‍ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನ ಹೊಂದಿದ್ದಾರೆ.

110 ಟೆಸ್ಟ್ ಪಂದ್ಯಗಳನ್ನು ಆಡಿದ್ದ  ಜಯಸೂರ್ಯ 40,07 ಸರಾಸರಿಯೊಂದಿಗೆ 6,973 ರನ್‍ಗಳನ್ನು ಗಳಿಸಿದ್ದಾರೆ. ಇದರಲ್ಲಿ 14 ಶತಕಗಳು ಮತ್ತು 31 ಅರ್ಧ ಶತಕಗಳು ಸೇರಿವೆ. 1997ರಲ್ಲಿ ಕೊಲೊಂಬೊದಲ್ಲಿ ಭಾರತ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಜಯಸೂರ್ಯ 340 ರನ್ ದಾಖಲಿಸಿದ್ದು ಅವರ ಗರಿಷ್ಠ ರನ್ ದಾಖಲೆಯಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.