ನಿಕ್‌ ಕಿರ್ಗೊಸ್‌ಗೆ ಪ್ರಶಸ್ತಿ

5

ನಿಕ್‌ ಕಿರ್ಗೊಸ್‌ಗೆ ಪ್ರಶಸ್ತಿ

Published:
Updated:
ನಿಕ್‌ ಕಿರ್ಗೊಸ್‌ಗೆ ಪ್ರಶಸ್ತಿ

ಬ್ರಿಸ್ಬೇನ್‌: ಆಸ್ಟ್ರೇಲಿಯಾದ ಆಟಗಾರ ನಿಕ್ ಕಿರ್ಗೊಸ್‌ ಬ್ರಿಸ್ಬೇನ್‌ ಇಂಟರ್‌ನ್ಯಾಷನಲ್‌ ಟೆನಿಸ್ ಟೂರ್ನಿಯಲ್ಲಿ ಭಾನುವಾರ ಪ್ರಶಸ್ತಿ ಜಯಿಸಿದ್ದಾರೆ.

ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಅವರು 6–4, 6–2ರಲ್ಲಿ ಅಮೆರಿಕದ ರ‍್ಯಾನ್‌ ಹ್ಯಾರಿಸನ್‌ ಅವರನ್ನು ಮಣಿಸಿದರು.

ಮೊಣಕಾಲು ನೋವಿನಿಂದಾಗಿ ಆರಂಭದಲ್ಲಿ ಪಾಯಿಂಟ್ಸ್ ಬಿಟ್ಟುಕೊಟ್ಟ ಕಿರ್ಗೊಸ್‌ ಬಳಿಕ ಚೇತರಿಸಿಕೊಂಡು ಆಡಿದರು. ಏಳನೇ ಗೇಮ್‌ ನಂತರ ಕಿರ್ಗೊಸ್‌ ತಮ್ಮ ನೈಜ ಆಟ ಆಡಿದರು. ಮೊದಲ ಸೆಟ್‌ನಲ್ಲಿ ಅಮೆರಿಕದ ಆಟಗಾರ ಡಬಲ್‌ ಫಾಲ್ಟ್ ಎಸಗುವ ಮೂಲಕ ಸೋಲು ಕಂಡರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 21ನೇ ಸ್ಥಾನದಲ್ಲಿರುವ ಕಿರ್ಗೊಸ್‌ ಎರಡನೇ ಸೆಟ್‌ನಲ್ಲಿ ಆರಂಭದಿಂದಲೇ ಉತ್ತಮ ಆಟದ ಮೂಲಕ ಎದುರಾಳಿಯ ಮೇಲೆ ಒತ್ತಡ ಹೇರಿದರು. ಇದರಿಂದ ಅಮೆರಿಕದ ಆಟಗಾರ ಕೇವಲ ಎರಡು ಗೇಮ್ ಮಾತ್ರ ಗೆದ್ದರು.

ವೃತ್ತಿಜೀವನದಲ್ಲಿ ಕಿರ್ಗೊಸ್‌ ಗೆದ್ದ ನಾಲ್ಕನೇ ಪ್ರಶಸ್ತಿ ಇದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry