‘ಸಾಹಿತ್ಯಾಭಿರುಚಿ ಬೆಳೆಸಲು ಕವಿಗೋಷ್ಠಿ ಪೂರಕ’

7

‘ಸಾಹಿತ್ಯಾಭಿರುಚಿ ಬೆಳೆಸಲು ಕವಿಗೋಷ್ಠಿ ಪೂರಕ’

Published:
Updated:

ಗದಗ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಗರದ ಆದರ್ಶ ಶಿಕ್ಷಣ ಸಮಿತಿಯ ಪದವಿಪೂರ್ವ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಈಚೆಗೆ ಜಿಲ್ಲಾಮಟ್ಟದ ಕವಿಗೋಷ್ಠಿ ನಡೆಯಿತು.

‘ಸಾಹಿತ್ಯ ಅಭಿರುಚಿ ಬೆಳೆಸಲು ಕವಿಗೋಷ್ಠಿ ಪೂರಕವಾಗಿದೆ. ಸಾಹಿತ್ಯದಿಂದ ಶಾಂತಿ, ನೆಮ್ಮದಿಯುತ ಜೀವನ ನಡೆಸಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರು ಸಾಹಿತ್ಯದ ಕುರಿತು ವಿಶೇಷ ಆಸಕ್ತಿ ಬೆಳೆಸಿಕೊಳ್ಳಬೇಕು’ ಎಂದು ಕವಿಗೋಷ್ಠಿ ಉದ್ಘಾಟಿಸಿದ ಎ.ಎಸ್‌.ಎಸ್‌ ಶಿಕ್ಷಣ ಸಮಿತಿಯ ಅಧ್ಯಕ್ಷ ಎ.ಎಲ್.ಪೋತ್ನಿಸ್ ಹೇಳಿದರು.

‘ಕವಿಗಳು ಸ್ವಯಂ ವಿಮರ್ಶೆ ಮಾಡಿಕೊಳ್ಳಬೇಕಿದೆ. ಅಧ್ಯಯನ, ಲೋಕಾನುಭವ, ಸಕಾರಾತ್ಮ ಚಿಂತನೆಗಳ ಮೂಲಕ ಕವಿಗಳು ಬೆಳೆಯಬೇಕು. ವಾಸ್ತವಿಕ ನೆಲೆಗಟ್ಟಿನ ಮೇಲೆ ಕವಿತೆ ರಚನೆಗೆ ಒತ್ತು ನೀಡಬೇಕು. ಜತೆಗೆ ಸ್ವಾರ್ಥ ರಹಿತ ಒಳಗಣ್ಣು ಹೊಂದಿರಬೇಕು’ ಎಂದು ಸಾಹಿತಿ ರಾಜೇಂದ್ರ ಗಡಾದ ಹೇಳಿದರು.

‘ಕವಿತೆಗಳನ್ನು ಕೇಳುವ, ಅಸ್ವಾದಿಸುವವರ ಸಂಖ್ಯೆ ಹೆಚ್ಚಾಗಬೇಕು. ಬದುಕಿನ ಅನುಭವ, ಒಳ್ಳೆಯ ಚಿಂತನೆಗಳನ್ನು ಒಳಗೊಂಡ ಸಾಹಿತ್ಯದ ರಚನೆಗೆ ಆದ್ಯತೆ ನೀಡಬೇಕು’ ಎಂದು ಸಾಹಿತಿ ಐ.ಕೆ.ಕಮ್ಮಾರ ಅಭಿಪ್ರಾಯಪಟ್ಟರು.

ಮಂಜುಳಾ ವೆಂಕಟೇಶಯ್ಯ, ವಿವೇಕಾನಂದಗೌಡ ಪಾಟೀಲ, ಹು.ಬಾ.ವಡ್ಡಟ್ಟಿ, ಅರುಣ ಕುಲಕರ್ಣಿ, ಬಸವರಾಜ ನೆಲಜೇರಿ, ಚೈತ್ರಾ ವಿಶ್ವ ಬ್ರಾಹ್ಮಣ, ಶಿಲ್ಪಾ ಕುರಿ, ಶೈನಾಜ ಕಟ್ಟಿಮನಿ, ಮರಳುಸಿದ್ಧಪ್ಪ ದೊಡ್ಡಮನಿ, ಎಸ್.ಬಿ.ದೊಡ್ಡಣ್ಣವರ, ಅನುಸೂಯಾ ಮಿಟ್ಟಿ, ಸದಾಶಿವ ದೊಡ್ಡಮನಿ, ಶಿವಶಂಕರಪ್ಪ ಅರಟ್ಟಿ ಅವರು ಕವನ ವಾಚನ ಮಾಡಿದರು.

ಸಾಹಿತ್ಯ ಅಕಾಡೆಮಿ ಸದಸ್ಯ ಬಿ.ಎಂ.ಹರಪನಹಳ್ಳಿ, ಡಿ.ವಿ.ಬಡಿಗೇರ, ಎಸ್‌.ಎಸ್‌.ಎ ಶಿಕ್ಷಣ ಸಮಿತಿಯ ಸಹ ಕಾರ್ಯದರ್ಶಿ ಎ.ಡಿ.ಗೋಡಖಿಂಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೋಗೇರಿ, ಪ್ರಾಚಾರ್ಯ ಆರ್.ಆರ್.ಕುಲಕರ್ಣಿ ಬಸವರಾಜ, ಬಾಹುಬಲಿ ಜೈನರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry