₹1 ಮುಖಬೆಲೆ ನಾಣ್ಯ ರದ್ದುಪಡಿಸಿದ ಉತ್ತರ ಪ್ರದೇಶದ ಭಿಕ್ಷುಕರು!

7

₹1 ಮುಖಬೆಲೆ ನಾಣ್ಯ ರದ್ದುಪಡಿಸಿದ ಉತ್ತರ ಪ್ರದೇಶದ ಭಿಕ್ಷುಕರು!

Published:
Updated:
₹1 ಮುಖಬೆಲೆ ನಾಣ್ಯ ರದ್ದುಪಡಿಸಿದ ಉತ್ತರ ಪ್ರದೇಶದ ಭಿಕ್ಷುಕರು!

ರಾಮ್‌ಪುರ(ಉತ್ತರಪ್ರದೇಶ): ಪ್ರಧಾನಿ ನರೇಂದ್ರ ಮೋದಿ ₹1000 ಮತ್ತು ₹500 ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿದ್ದರು. ಇದೀಗ ಭಿಕ್ಷುಕ ಸಮೂಹ ₹1 ಮುಖಬೆಲೆ ನಾಣ್ಯವನ್ನು ಸ್ವಯಂ ಪ್ರೇರಿತರಾಗಿ ರದ್ದುಪಡಿಸಿಕೊಳ್ಳಲು ನಿರ್ಧರಿಸಿದ್ದಾರೆ.

ಉತ್ತರಪ್ರದೇಶ ರಾಮ್‌ಪುರದ ಭಿಕ್ಷುಕರು ₹1ರ ನಾಣ್ಯವನ್ನು ಸ್ವೀಕರಿಸದಿರಲು ನಿರ್ಧರಿಸಿದ್ದಾರೆ. ‘ಪ್ರಧಾನಿ ನರೇಂದ್ರ ಮೋದಿ ₹1000, ₹500ರ ನೋಟುಗಳನ್ನು ರದ್ದುಪಡಿಸಿದ್ದರು. 50 ಪೈಸೆಯಷ್ಟು ಗಾತ್ರದ ₹1 ನಾಣ್ಯವನ್ನು ನಾವು ಈಗ ರದ್ದುಪಡಿಸುತ್ತಿದ್ದೇವೆ’ ಎಂದು ಭಿಕ್ಷುಕ ಶುಕ್ರ ಮಣಿ ಹೇಳಿದರು.

ನಾಣ್ಯದ ಗಾತ್ರದ ಕಾರಣದಿಂದಲೇ ರಿಕ್ಷಾ ಗಾಡಿಯವರು, ಅಂಗಡಿಯವರು ₹1 ನಾಣ್ಯವನ್ನು ಸ್ವೀಕರಿಸುತ್ತಿಲ್ಲ ಎಂದು ಆರೋಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry