ಕವನ ರಚನಾ ಸ್ಪರ್ಧೆ: ಗೋವಿಂದರಾಜು ಪ್ರಥಮ

5

ಕವನ ರಚನಾ ಸ್ಪರ್ಧೆ: ಗೋವಿಂದರಾಜು ಪ್ರಥಮ

Published:
Updated:

ಬೆಂಗಳೂರು: ದ.ರಾ. ಬೇಂದ್ರೆ ಕಾವ್ಯಕೂಟವು ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ರಾಜ್ಯ ಮಟ್ಟದ ‘ದ.ರಾ.ಬೇಂದ್ರೆ ಸ್ಮೃತಿ ಕವನ ರಚನಾ ಸ್ಪರ್ಧೆ’ಯಲ್ಲಿ ತುಮಕೂರು ವಿಶ್ವವಿದ್ಯಾಲಯದ ಕೆ. ಎಂ. ಗೋವಿಂದರಾಜು ಅವರು ಮೊದಲ ಬಹುಮಾನ ಪಡೆದಿದ್ದಾರೆ.

ಮೈಸೂರು ವಿಶ್ವವಿದ್ಯಾಲಯದ ಡಿ.ಆರ್‌. ಪ್ರದೀಪ್‌ ಎರಡನೇ ಬಹುಮಾನ ಹಾಗೂ ಮುಂಬೈ ವಿಶ್ವವಿದ್ಯಾಲಯದ ಅನಿತಾ ಪಿ. ಪೂಜಾರಿ ಕಾಕೊಡೆ ಮೂರನೇ ಬಹುಮಾನ ಪಡೆದಿದ್ದಾರೆ. ಮೊದಲ ಬಹುಮಾನಕ್ಕೆ ₹ 4,000, 2ನೇ ಬಹುಮಾನಕ್ಕೆ ₹ 3,000, 3ನೇ ಬಹುಮಾನಕ್ಕೆ ₹ 2,000 ನಗದು ಪುರಸ್ಕಾರವಿದೆ.

ಬೇಂದ್ರೆ ಅವರ ಜನ್ಮದಿನವಾದ ಇದೇ 31ರಂದು ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry